ತೇಜಸ್‌ ವಿಮಾನ ಕ್ರ್ಯಾಶ್‌ ಆಗ್ಲಿ ಅಂದ TMC ಸಂಸದ! ಕಿಡಿಕಾರಿದ ಬಿಜೆಪಿ!

masthmagaa.com:

ಪ್ರಧಾನಿ ನರೇಂದ್ರ ಮೋದಿ ತೇಜಸ್‌ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ಬೆನ್ನಲ್ಲೇ ವಿಪಕ್ಷ ನಾಯಕರು ಮೋದಿ ವಿರುದ್ಧ ಮುಗಿಬಿದ್ದಿದ್ದಾರೆ. ಅದ್ರಲ್ಲೂ ತೃಣಮೂಲ ಕಾಂಗ್ರೆಸ್(‌TMC) ಸಂಸದ ಶಂತನು ಸೇನ್‌ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. “ಸ್ಟೇಡಿಯಂಗೆ ಬಂದು ಫೈನಲ್‌ ಪಂದ್ಯ ಸೋಲಿಸಿದ ಹಾಗೆ, ಪ್ರಧಾನಿ ಬ್ಯಾಡ್‌ಲಕ್‌ನಿಂದ ತೇಜಸ್‌ ಯುದ್ಧವಿಮಾನ ಕ್ರ್ಯಾಶ್‌ ಆಗ್ಬೋದು” ಅಂತ ಟೀಕಿಸಿದ್ದಾರೆ. ಈ ಹೇಳಿಕೆ ಬಗ್ಗೆ ಬಿಜೆಪಿ ನಾಯಕ ಶೆಹ್ಜಾದ್‌ ಪೂನಾವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವಿಮಾನ ಕ್ರ್ಯಾಶ್‌ ಆದ್ರೆ ಪ್ರಾಣ ಕಳೆದುಕೊಳ್ಳೋದು ವಾಯುಸೇನೆ ಸಿಬ್ಬಂದಿ. TMC ಪಕ್ಷ ಪ್ರಧಾನಿ ಮೋದಿ ಹಾಗೂ ಆಡಳಿತ ಪಕ್ಷದ ಮೇಲಿನ ದ್ವೇಷದಿಂದ ತೀರಾ ಕೆಳಮಟ್ಟಕ್ಕೆ ಇಳೀತಿದೆ. ಹಿಂದೊಮ್ಮೆ ಮಮತಾ ಬ್ಯಾನರ್ಜಿ ಸರ್ಜಿಕಲ್‌ ಸ್ಟ್ರೈಕನ್ನೇ ಸುಳ್ಳು ಅಂದಿದ್ರು ಈಗ್ಲೂ ಅದೇ ತರ TMC ನಾಯಕರು ಸೇನಾ ವಿರೋಧಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪಕ್ಷ ಕ್ರಮ ತಗೊಳ್ಬೇಕು” ಅಂತ ಆಗ್ರಹಿಸಿದ್ದಾರೆ. ಇತ್ತ ಮೋದಿ ತೇಜಸ್‌ ರೌಂಡ್ಸ್‌ ಬಗ್ಗೆ ಕಾಂಗ್ರೆಸ್‌ ಲೀಡರ್‌ ಜೈರಾಮ್‌ ರಮೇಶ್‌ ಕೂಡ ಟೀಕೆ ಮಾಡಿದ್ದು, “master of chunavi photo-opportunist” ಅಂದ್ರೆ ಚುನಾವಣೆಗಾಗಿ ಫೋಟೋ ತೆಗೆಸಿಕೊಳ್ಳೋ ಅವಕಾಶವಾದಿ ಅಂತ ಆರೋಪಿಸಿದ್ದಾರೆ. ʻಮೋದಿ ಅವ್ರು ಈ ಹಿಂದಿನ ಸರ್ಕಾರಗಳು ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನಗಳ ಅಭಿವೃದ್ದಿಗೆ ಉತ್ತೇಜನ ಕೊಟ್ಟಿದ್ದಕ್ಕೆ ಕ್ರೆಡಿಟ್ಸ್‌ ಕೊಡಲ್ಲ. ಎಲ್ಲದಕ್ಕೂ ಸೇರಿ ಒಟ್ಟಿಗೇ ತಾವೇ ಕ್ರೆಡಿಟ್ಸ್ ತಗೋತಿದ್ದಾರೆ. ಎಲ್ಲಾನು ನಾನೆ ಮಾಡಿದೆ ಅಂತಾರೆ. ತೇಜಸ್‌ 1984ರಲ್ಲೇ ಡಿಸೈನ್‌ ಆಗಿತ್ತು. HAL, NAL(National Aerospace Laboratory) ಗಳ ಸಹಯೋಗದಲ್ಲಿ ನಿರ್ಮಾಣ ಆಗಿ 2011ರಲ್ಲಿ ಕಾರ್ಯಾಚರಣೆ ಶುರು ಮಾಡ್ತು. ಆದ್ರೆ ಈ ಚುನಾವಿ ಫೋಟೋ-ಓಪ್ಸ್‌ಗಳ ಮಾಸ್ಟರ್‌ 2014ಕ್ಕೂ ಮುಂಚಿನ ಸರ್ಕಾರಗಳ ಶ್ರಮವನ್ನ ಗುರುತಿಸಲ್ಲʼ ಅಂತ ವಾಗ್ದಾಳಿ ನಡೆಸಿದ್ದಾರೆ. ಅಂದ್ಹಾಗೆ ವಿಶ್ವಕಪ್‌ ಫೈನಲ್‌ ವೀಕ್ಷಿಸೋಕೆ ಮೋದಿ ಬಂದಿದ್ರಿಂದನೇ ಟೀಮ್‌ ಇಂಡಿಯಾ ಸೋಲ್ತು. ಮೋದಿ ಕೆಟ್ಟ ಶಕುನ ಅಂತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಂದಿದ್ರು. ಅಲ್ದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಪಾಪಿಗಳು ಸ್ಟೇಡಿಯಂಗೆ ಬಂದಿದ್ಕೆ ಭಾರತ ತಂಡ ಸೋಲ್ಬೇಕಾಯ್ತು ಅಂತ ಮೋದಿಯವರನ್ನ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ರು.

-masthmagaa.com

Contact Us for Advertisement

Leave a Reply