ತಾನು ಬೆಳೆದ ಬೆಳೆಯನ್ನ ಯಾರಿಗೂ ಕೊಡದೇ ರಷ್ಯಾ ಏನ್‌ ಮಾಡ್ತ ಇದೆ ಗೊತ್ತಾ?

masthmagaa.com:

ರಷ್ಯಾ ತಾನು ಬೆಳೆದ ಬೆಳೆಯನ್ನ ವಿಶ್ವ ಮಾರುಕಟ್ಟೆಗೆ ಕಳುಹಿಸುವ ಬದಲು ತಾನೆ ಬಳಸಿಕೊಳ್ಳುತ್ತಿದೆ. ಹಾಗೆ ತನ್ನ ಬೆಳೆಗಳ ಸಂಗ್ರಹ ಜಾಸ್ತಿ ಮಾಡಿಕೊಳ್ಳುವ ಹೊಸ ಉಪಾಯವನ್ನ ಕಂಡುಕೊಂಡಿದೆ. ರಷ್ಯಾ- ಯುಕ್ರೇನ್‌ ಮೇಲೆ ದಾಳಿ ಮಾಡಿದ ಬೆನ್ನಲ್ಲೆ ಅನೇಕ ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಹಾಗಾಗಿ ರಷ್ಯಾಗೆ ತಾನು ಬೆಳೆದ ಬೆಳೆಯನ್ನ ರಫ್ತು ಮಾಡಲು ಬಹಳ ಕಷ್ಟ ಆಗಿದೆ. ಅಲ್ಲದೆ ರಷ್ಯಾ ಜಗತ್ತಿನಲ್ಲಿಯೆ ಅತ್ಯಂತ ಹೆಚ್ಚು ಬೆಳೆಗಳನ್ನ ಬೆಳೆಯುತ್ತದೆ. ಯುಕ್ರೇನ್, ರಷ್ಯಾ ಜಗತ್ತಿಗೆ ಮೂರನೇ ಒಂದು ಭಾಗದಷ್ಟು ಗೋಧಿಯನ್ನ ಸರಬರಾಜು ಮಾಡ್ತ ಇತ್ತು. ಆದ್ರೆ ಇದೀಗ ಎರಡು ದೇಶಗಳು ಯುದ್ಧದಲ್ಲಿ ನಿರತ ಆಗಿರೋದ್ರಿಂದ ಗೋಧಿ ಸೇರಿ ಅನೇಕ ಬೆಳೆಗಳಿಲ್ಲದೆ, ಬೆಳೆಗಳ ಬೆಲೆ ಜಾಸ್ತಿ ಆಗಿ ಈಜಿಪ್ಟ್‌ ಸೇರಿದಂತೆ ಕೆಲವೊಂದು ದೇಶಗಳಿಗೆ ಸಮಸ್ಯೆ ಆಗ್ತ ಇದೆ.

-masthmagaa.com

Contact Us for Advertisement

Leave a Reply