ಸಲ್ಮಾನ್‌ ಖಾನ್‌ರನ್ನ ಏಪ್ರಿಲ್‌ 30ರಂದು ಕೊಲೆ ಮಾಡೊದಾಗಿ ಬೆದರಿಕೆ ಕರೆ!

masthmagaa.com:

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಇತ್ತೀಚೆಗೆ ಮೇಲಿಂದ ಮೇಲೆ ಕೊಲೆ ಬೆದರಿಕೆಗಳು ಬರ್ತಿವೆ. ಇದೀಗ ಮತ್ತೊಂದು ಬೆದರಿಕೆ ಕರೆ ಬಂದಿದು, ಏಪ್ರಿಲ್‌ 30ರಂದು ಸಲ್ಮಾನ್‌ ಖಾನ್‌ರನ್ನ ಕೊಲೆ ಮಾಡೋದಾಗಿ ರಾಕಿ ಹೆಸರಿನ ವ್ಯಕ್ತಿ ಕರೆ ಮಾಡಿದ್ದಾನೆ ಅಂತ ತಿಳಿದು ಬಂದಿದೆ. ನಿನ್ನೆ ರಾತ್ರಿ 9 ಗಂಟೆ ಹೊತ್ತಿಗೆ ಮುಂಬೈ ಪೊಲೀಸರ ಕಂಟ್ರೋಲ್‌ ರೂಂಗೆ ಕರೆ ಬಂದಿತ್ತು. ಆಗ ಏಪ್ರಿಲ್ 30ರಂದು ಸಲ್ಲುನ ಹತ್ಯೆ ಮಾಡಲಾಗುವುದು ಅಂತ ಹೇಳಿದ್ದಾರೆ. ಈ ಬಗ್ಗೆ ತನಿಖೆ ಮಾಡಲಾಗ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಅಂದ್ಹಾಗೆ ಈ ಹಿಂದೆ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯ್‌ ಜೈಲಿನಿಂದಲೇ ಸಲ್ಮಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ.

-masthmagaa.com

Contact Us for Advertisement

Leave a Reply