ಮಲೇರಿಯಾದ ಮೊದಲ ಲಸಿಕೆಯನ್ನು ಶಿಫಾರಸು ಮಾಡಿದ WHO

masthmagaa.com:

ವರ್ಷಕ್ಕೆ ವಿಶ್ವದಾದ್ಯಂತ 4 ಲಕ್ಷ ಜನರನ್ನು ಬಲಿ ಪಡೆಯುತ್ತಿರೋ ಸೊಳ್ಳೆಯಿಂದ ಜನಿಸೋ ಮಲೇರಿಯಾಗೆ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಗ್ರೀನ್ ಸಿಗ್ನಲ್ ನೀಡಿಲ್ಲ. ಜಸ್ಟ್ ಶಿಫಾರಸು ಮಾಡಿದೆ ಅಷ್ಟೆ.. ಈ ಲಸಿಕೆಯನ್ನು 1987ರಲ್ಲೇ ಫಾರ್ಮಾಸಿಟಿಕಲ್ ಕಂಪನಿ ಜಿಎಸ್​ಕೆ ಅಭಿವೃದ್ಧಿಪಡಿಸಿತ್ತು. ಇದನ್ನು ಯೂರೋಪಿಯನ್ ಯೂನಿಯನ್ ಆಫ್ರಿಕಾದ ಕೆಲ ದೇಶಗಳಲ್ಲಿ ಬಳಸಲು ಅನುಮೋದನೆ ಕೂಡ ನೀಡಿತ್ತು. ಅದರಂತೆ 2019ರಿಂದ ಈವರೆಗೆ ಆಫ್ರಿಕಾದ ಕೆಲ ದೇಶಗಳಲ್ಲಿ 23 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಇದು 30 ಪರ್ಸೆಂಟ್ ಮಾತ್ರ ಪರಿಣಾಮಕಾರಿಯಾಗಿರೋದ್ರಿಂದ ಇದನ್ನು ಬಳಸಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಅಂದಹಾಗೆ ಇದು ಅನುಮೋದನೆ ಪಡೆದಿರೋ ಮಲೇರಿಯಾದ ಏಕೈಕ ಲಸಿಕೆಯಾಗಿದೆ.

-masthmagaa.com

Contact Us for Advertisement

Leave a Reply