ವೈಟ್‌ಹೌಸ್‌ಗೆ ದಾಳಿ ಬೆದರಿಕೆ: ಫೇಕ್‌ ಕಾಲ್‌ನಿಂದ ಆತಂಕ ಸೃಷ್ಟಿ!

masthmagaa.com:

ಅಮೆರಿಕ ಅಧ್ಯಕ್ಷರ ನಿವಾಸ ವೈಟ್‌ ಹೌಸ್‌ ಮೇಲೆ ದಾಳಿ ಆಗುತ್ತೆ ಅನ್ನೋ ಫೇಕ್‌ ಕಾಲ್‌ ಬಂದಿದ್ದ ವಿಚಾರ ವರದಿಯಾಗಿದೆ. ವೈಟ್‌ ಹೌಸ್‌ಗೆ ಬೆಂಕಿ ಬಿದ್ದಿದೆ ಹಾಗೂ ಒಬ್ಬ ವ್ಯಕ್ತಿ ಅದ್ರಲ್ಲಿ ಸಿಕ್ಕಿಬಿದ್ದಿದ್ದಾನೆ ಅನ್ನೋ ಕರೆ ಫೇಕ್‌ ನಂಬರ್‌ನಿಂದ ಬಂದಿದೆ. ಕೂಡಲೇ ಭಾರಿ ಸಂಖ್ಯೆಯಲ್ಲಿ ರಕ್ಷಣಾ ಸಿಬ್ಬಂಧಿ ಹಾಗೂ ಅಗ್ನಿಶಾಮಕ, ಆಂಬುಲೆನ್ಸ್‌ಗಳು ವೈಟ್‌ಹೌಸ್‌ ಬಳಿಗೆ ಬಂದಿವೆ. ಆದ್ರೆ ಕೆಲವೇ ನಿಮಿಷಗಳಲ್ಲಿ ಈ ಕಾಲ್‌ ಫೇಕ್‌ ಅಂತ ಗೊತ್ತಾಗಿದೆ. ಅಂದ್ಹಾಗೆ ಈ ಕರೆ ಬಂದಾಗ ಅಧ್ಯಕ್ಷ ಜೋ ಬೈಡೆನ್‌ ವೈಟ್‌ಹೌಸ್‌ನಲ್ಲಿ ಇರ್ಲಿಲ್ಲ. ಇನ್ನು ಅತ್ತ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಅಮೆರಿಕ ಡಿಫೆನ್ಸ್‌ ಸೆಕ್ರೆಟರಿ ಲಾಯ್ಡ್‌ ಆಸ್ಟಿನ್‌ ಡಿಸ್ಚಾರ್ಜ್‌ ಆಗಿದ್ದಾರೆ. ಪ್ರಾಸ್ಟೇಟ್‌ ಕ್ಯಾನ್ಸರ್‌ ಚಿಕಿತ್ಸೆಗಾಗಿ ಆಸ್ಟಿನ್‌ ಡಿಸೆಂಬರ್‌ನಲ್ಲಿ ಆಸ್ಪತ್ರೆ ಸೇರಿದ್ರು.

-masthmagaa.com

Contact Us for Advertisement

Leave a Reply