ಕ್ಯಾನ್ಸರ್‌ ಬಗ್ಗೆ WHO ಶಾಕಿಂಗ್‌ ರಿಪೋರ್ಟ್! ಭಾರತದ ಅಂಕಿ-ಅಂಶ ಹೀಗಿವೆ!

masthmagaa.com:

ನಟಿ ಪೂನಂ ಪಾಂಡೆ ನಿಧನದ ವಿಚಾರದ ಬೆನ್ನಲ್ಲೇ ಕ್ಯಾನ್ಸರ್‌ ಕುರಿತಾದ ಮತ್ತೊಂದು ವರದಿ ಬೆಳಕಿಗೆ ಬಂದಿದೆ. 2022ರಲ್ಲಿ ಭಾರತದಲ್ಲಿ 14.1 ಲಕ್ಷ ಕ್ಯಾನ್ಸರ್‌ ಕೇಸ್‌ಗಳು ವರದಿಯಾಗಿವೆ. 9.1 ಲಕ್ಷ ಜನ್ರು ಕ್ಯಾನ್ಸರ್‌ನಿಂದ ಅಸುನೀಗಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. WHOನ ಅಂತರಾಷ್ಟ್ರೀಯ ಕ್ಯಾನ್ಸರ್‌ ರಿಸರ್ಚ್‌ ಏಜೆನ್ಸಿ (IARC) ಈ ವರದಿ ನೀಡಿದೆ. ಇದ್ರಲ್ಲಿ ಪುರುಷರಲ್ಲಿ ಬಾಯಿ, ಗಂಟಲು, ಶ್ವಾಸಕೋಶದ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬಂದಿದ್ರೆ, ಮಹಿಳೆಯರಲ್ಲಿ ಸ್ಥನ ಕ್ಯಾನ್ಸರ್ ಹಾಗೂ ಗರ್ಭಕಂಠ ಕ್ಯಾನ್ಸರ್‌ ಕೇಸ್‌ಗಳು ಹೆಚ್ಚಾಗಿ ವರದಿಯಾಗಿರೋದು ಗೊತ್ತಾಗಿದೆ. ಇನ್ನು ಕಳೆದ 5 ವರ್ಷಗಳಲ್ಲಿ ಒಮ್ಮೆಯಾದ್ರು ಕ್ಯಾನ್ಸರ್‌ ತಪಾಸಣೆಗೆ ಒಳಗಾಗಿರೋ 32.6 ಲಕ್ಷ ಜನರು ಭಾರತದಲ್ಲಿದ್ದಾರೆ. ಜಾಗತಿಕವಾಗಿ ಈ ಸಂಖ್ಯೆ 5.3 ಕೋಟಿ ಇದೆ ಅಂತ WHO ಹೇಳಿದೆ.

-masthmagaa.com

Contact Us for Advertisement

Leave a Reply