ಚೀನಾದ ಲ್ಯಾಬ್​ನಿಂದಲೇ ಕೊರೋನಾ! ಯಾರು ಏನ್ ಹೇಳಿದ್ರು?

masthmagaa.com:

ಕೊರೋನಾ ಬಗ್ಗೆ ಚೀನಾ ಘೋಷಿಸುವ ಮುನ್ನವೇ 2019ರ ನವೆಂಬರ್​ನಲ್ಲೇ ವುಹಾನ್​ ಲ್ಯಾಬ್​ನ ಮೂವರು ತಜ್ಞರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡು, ಆಸ್ಪತ್ರೆಗೆ ಅಡ್ಮಿಟ್ ಆಗಿ ಟ್ರೀಟ್ಮೆಂಟ್ ತಗೊಂಡಿದ್ರು ಅಂತ ಇತ್ತೀಚೆಗಷ್ಟೇ ವಾಲ್​ಸ್ಟ್ರೀಟ್​​​​ ಜರ್ನಲ್​​ನಲ್ಲಿ ವರದಿಯಾಗಿತ್ತು. ಆದ್ರೆ ಚೀನಾ ತನ್ನ ಹಳೇ ರಾಗ ಮುಂದುವರಿಸಿದೆ. ಏ.. ಇಲ್ಲ.. ಇದೆಲ್ಲಾ ಫುಲ್ ಸುಳ್ಳು ವರದಿ ಅಂತ ನಯವಾಗಿ ನಿರಾಕರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್​​, 2019ರ ಡಿಸೆಂಬರ್​​ಗೂ ಮುನ್ನ ದೇಶದಲ್ಲಿ ಒಂದೇ ಒಂದು ಕೊರೋನಾ ಪತ್ತೆಯಾಗಿರಲಿಲ್ಲ. ಲ್ಯಾಬ್​​​​ನ ಸ್ಟಾಫ್ ಮತ್ತು ಪದವೀಧರ ವಿದ್ಯಾರ್ಥಿಗಳ ಪೈಕಿ ಈವರೆಗೆ ಯಾರಿಗೂ ಕೊರೋನಾ ಬಂದಿಲ್ಲ.. ಅಮೆರಿಕ ಗುಪ್ತಚರ ವರದಿಯಲ್ಲಿರೋದು ಶುದ್ಧ ಸುಳ್ಳು ಅಂತ ಸ್ಪಷ್ಟನೆ ನೀಡಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ ವೈಟ್ ಹೌಸ್​ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ, ನಾವು ವಾಲ್​ ಸ್ಟ್ರೀಟ್ ಜರ್ನಲ್​​ನ ವರದಿಯನ್ನು ನಾವು ದೃಢಪಡಿಸೋದಿಲ್ಲ.. ಈ ವಿಚಾರದಲ್ಲಿ ಮತ್ತಷ್ಟು ಮಾಹಿತಿಯ ಅಗತ್ಯತೆ ಇದೆ ಅಂತ ಹೇಳಿದ್ದಾರೆ. ಆದ್ರೆ ಈವರೆಗೆ ಸಿಕ್ಕಿರೋ ಎಲ್ಲಾ ಸಾಕ್ಷ್ಯಾಧಾರಗಳು ಚೀನಾದ ವುಹಾನ್ ಇನ್​​ಸ್ಟಿಟ್ಯೂಟ್ ಆಫ್ ವೈರಾಲಜಿ ಕಡೆಗೆ ಬೊಟ್ಟು ಮಾಡುತ್ತಿವೆ ಅಂತ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply