ಐಎಎಸ್ ಪೋಸ್ಟಿಂಗ್ ಸಂಬಂಧಿತ ರೂಲ್ಸ್​​​​​ಗೆ ತಿದ್ದುಪಡಿ?

masthmagaa.com:

ಐಎಎಸ್ ಅಂದ್ರೆ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್​​ ಅಧಿಕಾರಿಗಳ ಪೋಸ್ಟಿಂಗ್ ಸಂಬಂಧಿತ ರೂಲ್ಸ್​ನಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತರಲು ಹೊರಟಿರೋದು ರಾಜ್ಯ ಸರ್ಕಾರಗಳ ಜೊತೆಗೆ ಹೊಸದೊಂದು ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈಗಾಗಲೇ ಐಎಎಸ್ ರೂಲ್ಸ್​ 1954ಕ್ಕೆ ಏನೆಲ್ಲಾ ತಿದ್ದುಪಡಿ ಮಾಡಲಾಗ್ತಿದೆ ಅನ್ನೋ ಪಟ್ಟಿಯೊಂದನ್ನು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದೆ. ಸದ್ಯ ಈಗ ರಾಜ್ಯಗಳಲ್ಲಿ ನಿಯೋಜನೆಗೊಳ್ತಿರೋ ಐಎಎಸ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಮತ್ತೊಂದು ಸೇವೆಗೆ ಕರೆಸಿಕೊಳ್ಳಲು ರಾಜ್ಯ ಸರ್ಕಾರದ ಅನುಮತಿ ಬೇಕು. ಆದ್ರೆ ರಾಜ್ಯ ಸರ್ಕಾರಗಳು ಈ ಕ್ರಮಕ್ಕೆ ತಡೆಯೊಡ್ಡುತ್ತಿವೆ. ಇದ್ರಿಂದ ಕೇಂದ್ರ ಸರ್ಕಾರ ಕಾರ್ಯ ನಿರ್ವಹಣೆಯಲ್ಲಿ ಅಡೆತಡೆ ಉಂಟಾಗ್ತಿದೆ. ಹೀಗಾಗಿ ಈ ತಿದ್ದುಪಡಿಯಾದ್ರೆ ಕೇಂದ್ರ ಸರ್ಕಾರ ನೇರವಾಗಿ ರಾಜ್ಯದಲ್ಲಿ ಸೇವೆಯಲ್ಲಿರೋ ಐಎಎಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ನಿಯೋಜಿಸಲು ಅವಕಾಶ ಸಿಗಲಿದೆ. ಈ ಬದಲಾವಣೆಗೆ ಜನವರಿ 25ರೊಳಗೆ ಉತ್ತರಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದ್ದು, ಬಜೆಟ್ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲು ಪ್ಲಾನ್ ಮಾಡಿದೆ.

-masthmagaa.com

Contact Us for Advertisement

Leave a Reply