ಸ್ವಾತಂತ್ರ್ಯ ಬಂದು 75 ವರ್ಷ.. ಇನ್ನೂ ದೇಶದ್ರೋಹ ಕೇಸ್ ಬೇಕಾ?- ಸುಪ್ರೀಂಕೋರ್ಟ್​ ಪ್ರಶ್ನೆ

masthmagaa.com:

ದೇಶದ್ರೋಹ ಕಾನೂನು ವಸಾಹತುಶಾಹಿ ಕಾಲದ ಕಾನೂನು.. ಈಗಲೂ ಆ ಕಾನೂನು ಅಗತ್ಯವಿದೆಯಾ ಅಂತ ಸುಪ್ರೀಂಕೋರ್ಟ್​ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ನಿವೃತ್ತ ಮೇಜರ್ ಜನರಲ್ ಎಸ್​​.ಜಿ ವೊಂಬಟ್ಕೆರೆ ಅನ್ನೋರು ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿ, ದೇಶದ್ರೋಹ ಕಾನೂನು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆ. ಅದನ್ನು ತೆಗೆದು ಹಾಕಬೇಕು ಅಂತ ಒತ್ತಾಯಿಸಿದ್ರು. ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಎನ್​ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಈ ಅರ್ಜಿ ವಿಚಾರಣೆ ನಡೀತು. ಈ ವೇಳೆ ಮಾತನಾಡಿದ ಎನ್​ವಿ ರಮಣ, ಈ ಕಾನೂನು ಕಾರ್ಪೆಂಟರ್ ಕೈಗೆ ಗರಗಸ ಕೊಟ್ಟಂಗೆ.. ಆತ ಇಡೀ ಅರಣ್ಯವನ್ನು ನಾಶ ಮಾಡಿ ಹಾಕ್ತಾನೆ.. ಅಷ್ಟಕ್ಕೂ ಇದು ವಸಾಹತುಶಾಹಿ ಕಾನೂನು.. ಬ್ರಿಟಿಷರು ಮಹಾತ್ಮಾ ಗಾಂಧೀಜಿಯವರನ್ನು ಸುಮ್ಮನಾಗಿಸಲು, ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ಈ ಕಾನೂನು ಬಳಸಿಕೊಂಡಿದ್ರು. ಸ್ವಾತಂತ್ರ್ಯ ಬಂದು 75 ವರ್ಷ ಆಗ್ತಾ ಬಂದ್ರೂ ಇನ್ನೂ ಈ ಕಾನೂನಿನ ಅಗತ್ಯತೆ ಇದೆಯಾ ಅಂತ ಪ್ರಶ್ನಿಸಿದ್ದಾರೆ. ಈಗ ಗ್ರಾಮದಲ್ಲಿ ಯಾರನ್ನಾದ್ರೂ ಸಿಲುಕಿಸಬೇಕಾದ್ರೆ ಪೊಲೀಸರು ಈ ಕೇಸ್ ಬಳಸಬಹುದು. ಇದ್ರಿಂದ ಈ ಕಾನೂನು ಮಿಸ್​ ಯೂಸ್ ಆಗೋ ಸಾಧ್ಯತೆ ಜಾಸ್ತಿ ಇರುತ್ತೆ. ಇತಿಹಾಸ ನೋಡಿದ್ರೆ ಕೆಲವೇ ಕೆಲವು ದೇಶದ್ರೋಹ ಪ್ರಕರಣಗಳಲ್ಲಿ ಮಾತ್ರವೇ ಆರೋಪ ಸಾಬೀತಾಗಿದೆ. ಈ ಸಂಬಂಧ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲವನ್ನು ಒಟ್ಟಿಗೆ ವಿಚಾರಣೆ ಮಾಡ್ತೀವಿ ಅಂತ ಸಿಜೆ ಎನ್​ವಿ ರಮಣ ಹೇಳಿದ್ದಾರೆ. ಜೊತೆಗೆ ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ.

-masthmagaa.com

Contact Us for Advertisement

Leave a Reply