ಪತ್ನಿಯಿಂದ ಹಿಂಸೆ: ಪತಿಯ ಡಿವೋರ್ಸ್ ಅರ್ಜಿಗೆ ಓಕೆ ಎಂದ ಕೋರ್ಟ್​​

masthmagaa.com:

ಪತಿಗೆ ಮಾನಸಿಕ ಹಿಂಸೆ ನೀಡಿದ ಕಾರಣ ನೀಡಿ ಮುಂಬೈ ಹೈಕೋರ್ಟ್ ಪತಿಯ ಡಿವೋರ್ಸ್ ಅರ್ಜಿಯನ್ನ ಓಕೆ ಮಾಡಿದೆ. ಈ ಕೇಸಲ್ಲಿ ಪತ್ನಿ 2015ರಲ್ಲಿ ಮದುವೆ ಆಗಿ ಒಂದೇ ವರ್ಷದಲ್ಲಿ ಪತಿಯಿಂದ ದೂರ ಹೋಗಿದ್ದಳು. ಪತಿ ವಿರುದ್ಧ ಕೌಟುಂಬಿಕ ಹಿಂಸೆ ಕೇಸು ಹಾಕಿದ್ದಳು, ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಳು. ಆದ್ರೆ ಡಿವೋರ್ಸ್ ಕೊಡೋಕೆ ಮಾತ್ರ ಒಪ್ಪುತ್ತಿರಲಿಲ್ಲ. ಗಂಡನ ಮನೇಲಿ ಹಿಂಸೆ ನೀಡಿದರೂ ನಾನೇ ಹೊಂದಿಕೊಂಡು ಹೀಗ್ತಿದ್ದೆ ಅಂತೆಲ್ಲ ವಾದ ಮಾಡಿದ್ದಳು. ಆದ್ರೆ ಈ ಸಲ ಸರಿಯಾಗಿ ಸಿಕ್ಕಾಕೊಂಡಿದಾಳೆ. 36 ವರ್ಷದ ಗಂಡ ಸರಿಯಾದ ಪ್ರೂಫನ್ನೇ ಹುಡಕಿ ತಂದು ಕೋರ್ಟ್ ಮುಂದಿಟ್ಟಿದ್ದಾನೆ. ತನ್ನ ಮತ್ತೆ ಮದುವೆಯಾಗಲು ಮ್ಯಾಟ್ರಿಮೋನಿಯಲ್ ಪೋರ್ಟಲ್ ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಹುಡುಕಾಟ ಶುರು ಮಾಡಿದ್ದಾಳೆ ಅಂತ ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದಾನೆ. ಇದನ್ನೆಲ್ಲ ಗಮನಿಸಿದ ಕೋರ್ಟ್ ಈ ಲೇಡಿಗೆ ಮದುವೆ ಉಳಿಸೋ ಯಾವುದೇ ಇಂಟೆನ್ಶನ್ ಇಲ್ಲ. ಈಕೆ ಕೇವಲ ಪತಿಗೆ ಮೆಂಟಲ್ ಟಾರ್ಚರ್ ಕೊಡೋಕಂತಾನೇ ಎಲ್ಲಾ ಮಾಡ್ತಿರೋದು ಅಂತ ಹೇಳಿ ವಿಚ್ಚೇದನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

-masthmagaa.com

Contact Us for Advertisement

Leave a Reply