ಸಹಾಯಕ್ಕೆ ಬಾಯಿ ತೆರೆದ ಪಾಕ್​​​​​​​ ಬಾಯಿಗೆ ಅಮೆರಿಕ ಮೆಣಸಿನಕಾಯಿ!

masthmagaa.com:

ಅಮೆರಿಕದಲ್ಲಿ ಬೈಡೆನ್ ಸರ್ಕಾರ ಬಂದ್ಮೇಲೆ ನಮಗೆ ಸ್ವಲ್ಪ ಹೆಲ್ಪ್ ಆಗ್ಬೋದು.. ಸಪೋರ್ಟ್ ಸಿಗ್ಬೋದು ಅಂತ ಬಾಯಿ ಕಳ್ಕೊಂಡು ಕೂತಿದ್ದ ಪಾಕಿಸ್ತಾನಕ್ಕೆ ಮುಖಭಂಗದ ಮೇಲೆ ಮುಖಭಂಗ ಆಗ್ತಿದೆ. ಅಮೆರಿಕದಿಂದ ಪಾಕಿಸ್ತಾನಕ್ಕೆ ಸಿಗುತ್ತಿದ್ದ ಭದ್ರತಾ ಸಹಾಯದ ಮೇಲಿನ ತಡೆಯನ್ನು ತೆರವುಗೊಳಿಸಲು ಬೈಡೆನ್ ಸರ್ಕಾರ ನಿರಾಕರಿಸಿದೆ. ಮೊದಲಿಂದಲೂ ಅಮೆರಿಕಾದಿಂದ ಪಾಕಿಸ್ತಾನಕ್ಕೆ ಭದ್ರತಾ ನೆರವು ಬರ್ತಾ ಇತ್ತು. ಆದ್ರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಇದ್ರ ಮೇಲೆ ಕಡಿವಾಣ ಹಾಕಿದ್ರು. ಇತ್ತೀಚೆಗಷ್ಟೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಭೇಟಿಯಾಗಿದ್ರು. ಅದೇ ರೀತಿ ಜಿನೇವಾದಲ್ಲಿ ಅಮೆರಿಕ ಮತ್ತು ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಕೂಡ ಭೇಟಿಯಾಗಿ ಮಾತುಕತೆ ನಡೆಸಿದ್ರು. ಸೋ ಇದೇ ವಿಚಾರವಾಗಿ ಚರ್ಚೆ ನಡೆದಿರಬಹುದು ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೀಗ ಪಾಕ್​​​ಗೆ ಭದ್ರತಾ ಸಹಾಯದ ಮೇಲೆ ಟ್ರಂಪ್ ಹೇರಿದ್ದ ನಿರ್ಬಂಧವನ್ನು ಮುಂದುವರಿಸಲಾಗುತ್ತೆ ಅಂತ ಪೆಂಟಗಾನ್​​ ಹೇಳಿದೆ. ಪೆಂಟಗಾನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಸುದ್ದಿಗೋಷ್ಟಿ ನಡೆಸುವಾಗ, ಬೈಡೆನ್ ಆಡಳಿತದಲ್ಲಿ ಟ್ರಂಪ್ ಅವಧಿಯ ರಕ್ಷಣಾ ನೀತಿಗಳಲ್ಲಿ ಬದಲಾವಣೆಯಾಗುತ್ತಾ? ಪಾಕಿಸ್ತಾನದ ರಕ್ಷಣಾ ಸಹಾಯಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆಯಾಗುತ್ತಾ ಅಂತ ಪ್ರಶ್ನೆ ಕೇಳಲಾಯ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಾನ್ ಕಿರ್ಬಿ, ಭದ್ರತಾ ಸಹಾಯಕ್ಕೆ ಸಂಬಂಧಿಸಿದಂತೆ ಸದ್ಯ ಏನೂ ನಿರ್ಧಾರವಾಗಿಲ್ಲ. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ನಡುವೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆದಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕ ಬೆಂಬಲಕ್ಕೆ ಲಾಯ್ಡ್​ ಆಸ್ಟಿನ್ ಹೊಗಳಿಕೆ ವ್ಯಕ್ತಪಡಿಸಿದ್ರು ಅಂತ ಹೇಳಿದ್ದಾರೆ. ಅಂದಹಾಗೆ ಈ ಹಿಂದೆ 2018ರಲ್ಲಿ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ಧಾಗ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಸಹಕರಿಸುತ್ತಿಲ್ಲ ಅಂತ ಆರೋಪಿಸಿ ಅಮೆರಿಕದಿಂದ ಪಾಕ್​​​ಗೆ ನೀಡಲಾಗುತ್ತಿದ್ದ ಭದ್ರತಾ ಸಹಾಯಕ್ಕೆ ತಡೆ ನೀಡಲಾಗಿತ್ತು. ಆದ್ರೀಗ ಬೈಡೆನ್ ಸರ್ಕಾರ ಕೂಡ ಅದನ್ನ ಮುಂದುವರಿಸಿರೋದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಅಂತಲೇ ಹೇಳಬಹುದು.

-masthmagaa.com

Contact Us for Advertisement

Leave a Reply