ಬಾಯ್​ಫ್ರೆಂಡ್ ಜೊತೆ ಮದ್ವೆಗೆ ಫೇಕ್ ರೇಪ್ ನಾಟಕ ಆಡಿದ 19ರ ಹುಡುಗಿ!

masthmagaa.com:
19 ವರ್ಷದ ಹುಡುಗಿಯೊಬ್ಬಳು ತನ್ನ ಪ್ರಿಯತಮನನ್ನು ಮದುವೆಯಾಗಲು ಸಾಮೂಹಿಕ ಅತ್ಯಾಚಾರದ ಸುಳ್ಳು ಕಥೆ ಹೇಳಿದ್ದಾಳೆ. ಕಲಮ್​​​ನಾ ಪೊಲೀಸ್ ಠಾಣೆಗೆ ಬಂದ ಯುವತಿ ನಾಗ್ಪುರದ ಚಿಕಾಲಿ ಬಳಿ, ಇಬ್ಬರು ಯುವಕರು ಬಿಳಿ ಕಾರಲ್ಲಿ ಬಂದು ರಸ್ತೆ ಕೇಳಿದ್ರು. ನಂತ್ರ ನನ್ನನ್ನು ಕಾರೊಳಗೆ ಎಳ್ಕೊಂಡು, ನಿರ್ಜನ ಪ್ರದೇಶಕ್ಕೆ ಕರ್ಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಅಂತ ಆರೋಪಿಸಿದ್ರು. ಈ ವೇಳೆ ಪೊಲೀಸರು ಸೆನ್ಸೇಷನ್ ಕೇಸ್ ಅನ್ಕೊಂಡು ಫುಲ್ ಗೇಜಲ್ಲಿ ತನಿಖೆ ಶುರು ಮಾಡಿದ್ರು. ನಾಗ್ಪುರ ಪೊಲೀಸ್ ಕಮಿಷನರ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತನಿಖೆಯಲ್ಲಿ ಭಾಗಿಯಾದ್ರು. ಸುಮಾರು 250ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿದ್ರು. ನಂತರ ಈ ಹುಡುಗಿ ಸುಳ್ ಕಥೆ ಕೇಳ್ತಿದ್ದಾಳೆ ಅನ್ನೋ ನಿರ್ಧಾರಕ್ಕೆ ಬಂದ್ರು. ಆಗ ಹುಡುಗಿ ಕೂಡ ಸತ್ಯ ಒಪ್ಪಿಕೊಂಡಿದ್ದು, ನಾನು ಹುಡುಗನನ್ನು ಮದ್ವೆಯಾಗಕ್ಕೆ ಹಿಂಗೆ ಸುಳ್ ಹೇಳ್ದೆ ಅಂತ ಹೇಳಿದ್ದಾಳೆ.
-masthmagaa.com

Contact Us for Advertisement

Leave a Reply