ಚೀನಾದ ಟಫ್ ಲಾಕ್​ಡೌನ್​​ಗೆ ಗರ್ಭಿಣಿಗೆ ಗರ್ಭಪಾತ!

masthmagaa.com:

ಚೀನಾ ಝೀರೋ ಕೊರೋನಾ ಗುರಿಯನ್ನು ಹಾಕ್ಕೊಂಡು ಮುಂದೆ ಸಾಗ್ತಿದ್ದು, ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಕೊರೋನಾ ಪತ್ತೆಯಾದ ಶಿಯಾನ್ ನಗರವನ್ನು ಕಂಪ್ಲೀಟಾಗಿ ಲಾಕ್​ಡೌನ್ ಮಾಡಿತ್ತು. ಈ ವೇಳೆ 8 ತಿಂಗಳ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಬಂದಾಗ ಕೊರೋನಾ ಟೆಸ್ಟ್ ಮಾಡಿಸ್ಕೊಂಡು ಬನ್ನಿ ಅಂತ ಹೇಳಿ ಅವರಿಗೆ ಪ್ರವೇಶ ನೀಡಲಿಲ್ಲ. ಇದಾದ ಬಳಿಕ ಆ ಗರ್ಭಿಣಿಗೆ ಗರ್ಭಪಾತವಾಗಿತ್ತು. ಇದ್ರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಇದ್ರಲ್ಲಿ ಗರ್ಭಿಣಿ ಆಸ್ಪತ್ರೆಯ ಹೊರಭಾಗದಲ್ಲಿ ಸ್ಟೂಲ್​​ನಲ್ಲಿ ಕೂತಿದ್ದು, ಸುತ್ತಲೂ ರಕ್ತ ಹರಿದಿರೋದನ್ನು ನೋಡಬಹುದಾಗಿದೆ. ಜೊತೆಗೆ ಹೀಗ್ಹೀಗೆ ಆಗಿದೆ ಅಂತ ಮಹಿಳೆಯ ಸಂಬಂಧಿಯೊಬ್ಬರು ವಿವರಿಸಿದ್ದಾರೆ. ಅಧಿಕಾರಿಗಳ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದ್ರ ಬೆನ್ನಲ್ಲೇ ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೀವಿ ಅಂತ ಚೀನಾ ತಿಳಿಸಿದೆ. ಸದ್ಯ ಆ ಪೋಸ್ಟ್​​ಗಳನ್ನು ಕೂಡ ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕಲಾಗಿದೆ.

ಇನ್ನು ಶಿಯಾನ್​​ನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಇವತ್ತು 35 ಮಂದಿಯಲ್ಲಿ ಮಾತ್ರ ಕೊರೋನಾ ಬಂದಿದೆ. ನಿನ್ನೆ ಇಲ್ಲಿ ಒಂದೇ ದಿನ 95 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅಂದಹಾಗೆ ಇವತ್ತು ಇಡೀ ಚೀನಾದಲ್ಲಿ 189 ಮಂದಿಗೆ ಸೋಂಕು ಅಂಟಿದೆ.

-masthmagaa.com

Contact Us for Advertisement

Leave a Reply