ಭಾರತದ ಜಿಡಿಪಿ 7.5%ರಲ್ಲಿ ಬೆಳೆಯುತ್ತೆ ಅಂತೇಳಿದ ವರ್ಲ್ಡ್‌ ಬ್ಯಾಂಕ್‌!

masthmagaa.com:

ಈ ವರ್ಷ ಭಾರತದ ಜಿಡಿಪಿಯಲ್ಲಿ ಭಾರಿ ಬೆಳವಣಿಗೆಯಾಗಲಿದೆ ಅಂತ ವರ್ಲ್ಡ್‌ ಬ್ಯಾಂಕ್‌ ಹೇಳಿದೆ. 2024ರಲ್ಲಿ ಭಾರತದ ಜಿಡಿಪಿ 7.5%ರ ದರದಲ್ಲಿ ಬೆಳವಣಿಗೆ ಆಗಲಿದೆ ಅಂತ ವರ್ಲ್ಡ್‌ ಬ್ಯಾಂಕ್‌ ಅಂದಾಜು ಮಾಡಿದೆ. ಅಂದ್ರೆ ತನ್ನ ಕಳೆದ ಅಂದಾಜಿಗಿಂತ ಗ್ರೌತ್‌ ರೇಟ್‌ನ್ನ 1.2% ಹೆಚ್ಚು ಮಾಡಿದೆ. ಈ ಮೂಲಕ ದಕ್ಷಿಣ ಏಷ್ಯಾದಲ್ಲಿ ಈ ವರ್ಷ ಜಿಡಿಪಿ 6% ದರದಲ್ಲಿ ಬೆಳವಣಿಗೆಯಾಗುತ್ತೆ ಅಂತ ವರ್ಲ್ಡ್‌ ಬ್ಯಾಂಕ್‌ ಹೇಳಿದೆ. ಅಲ್ದೇ ಆರ್ಥಿಕತೆಯ ಸಂಕಷ್ಟಕ್ಕೆ ಸಿಲುಕಿರೊ ಪಾಕ್‌ ಮತ್ತು ಶ್ರೀಲಂಕಾಗಳ ಜಿಡಿಪಿ ಬೆಳವಣಿಗೆಗೆ ಭಾರತ ಪ್ರೆರೇಪಣೆ ಅಂತ ವರ್ಲ್ಡ್‌ ಬ್ಯಾಂಕ್‌ ಅಭಿಪ್ರಾಯ ಪಟ್ಟಿದೆ.

-masthmagaa.com

Contact Us for Advertisement

Leave a Reply