RRR ಸಿನಿಮಾಗೆ ಪ್ರಪಂಚದ ಪ್ರತಿಷ್ಠಿತ ಸಿನಿಮಾ ಅವಾರ್ಡ್

masthmagaa.com:

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಮಕುಟಕ್ಕೆ ಎರಡು ಗರಿ ಸಿಕ್ಕಿದೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸೇರಿದಂತೆ ಹಲವು ಇಂಟರ್ನ್ಯಾಷನಲ್ ಅವಾರ್ಡ್ ಗಳನ್ನ ಪಡೆದುಕೊಂಡು ಬೀಗಿರುವ RRR ಸಿನಿಮಾಗೆ ಪ್ರಪಂಚದ ಪ್ರತಿಷ್ಠಿತ ಸಿನಿಮಾ ಅವಾರ್ಡ್ ಎಂದು ಕರೆಯಲ್ಪಡುವ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಎಸ್ ಎಸ್ ರಾಜಮೌಳಿ ಅಂಡ್ ಟೀಮ್ ಇತಿಹಾಸವನ್ನ ಸೃಷ್ಟಿ ಮಾಡಿದೆ. ಹಾಗೆ ‘ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್’ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರಸ್’ ಡಾಕ್ಯುಮೆಂಟರಿಗೂ ಕೂಡ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಭಾರತಕ್ಕೆ ಡಾಕ್ಯುಮೆಂಟರಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್ ಎಂಬ ಮಹಿಳೆ ನಿರ್ದೇಶನ ಮಾಡಿದ್ದಾರೆ. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ ‘ದಿ ಎಲಿಫೆಂಟ್ ವಿಸ್ಪರಸ್’ ಪಾತ್ರವಾಗಿದೆ.

ಲಾಸ್ ಏಂಜಲೀಸ್ ಅಲ್ಲಿ ನಡೆಯುತ್ತಿರುವ 95 ನೇ ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶನದ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಇರುವ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಬೆಸ್ಟ್ original ಸಾಂಗ್ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಸಿಕ್ಕಿದೆ. Actually ಈ ಒಂದು ಪ್ರಶಸ್ತಿಯ ಫೈನಲ್ ರೇಸ್ ನಲ್ಲಿ ‘ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಈ ಮೊದಲಾದ ಹಾಡುಗಳು ಆಸ್ಕರ್ ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ.

ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆ ಆಗ್ತಾ ಇದ್ದ ಹಾಗೆ ಆಡಿಟೋರಿಯಂ ತುಂಬಾ ಚೆಪ್ಪಾಳೆಯ ಸದ್ದು ಜೋರಾಗಿತ್ತು. ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದರು. ಅಲ್ಲದೇ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರತಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Actually, ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿ ಇದ್ದವು. ಹಾಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಕೊಟ್ಟಿರೋದು, ಇದೆಲ್ಲ ಭಾರತಕ್ಕೆ ಹೆಮ್ಮೆಯ ವಿಷಯಗಳು ಎನ್ನಬಹುದು.

ಇನ್ನು ಆಸ್ಕರ್ ಟ್ರೋಫಿಯನ್ನ ಸ್ವೀಕರಿಸಿದ ನಂತರ ಕೈಯಲ್ಲಿ ಟ್ರೋಫಿಯನ್ನ ಹಿಡಿದು ಮಾತನಾಡಲು ಆರಂಭಿಸಿದ ಕೀರವಾಣಿ ಮೊದಲಿಗೆ ಮಾತು ಮರೆತು ಹಾಡಿನ ರೂಪದಲ್ಲಿ ಸಂತೋಷ ವ್ಯಕ್ತಪಡಿಸಿದರು, ನಂತರ ಮುಂದುವರೆದು, “ಆಸ್ಕರ್ ನೀಡಿದ ಅಕಾಡೆಮಿಗೆ ಧನ್ಯವಾದ. ಈ ದಿನ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ತಂದಿದೆ. ನನ್ನ ಮನಸ್ಸಿನಲ್ಲಿ ಒಂದು ಆಸೆ ಇತ್ತು. ರಾಜಮೌಳಿ ಮತ್ತವರ ತಂಡ ಹಾಗೂ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತೆ RRR ಆಸ್ಕರ್ ಎತ್ತಿ ಹಿಡಿದಿದೆ. ನಮ್ಮನ್ನು ಪ್ರಪಂಚದ ಅಗ್ರಸ್ಥಾನದಲ್ಲಿ ನಿಲ್ಲಿಸಿದೆ. ಇದಕ್ಕಾಗಿ ಶ್ರಮಿಸಿದ ಕಾರ್ತಿಕೇಯಗೆ ಥ್ಯಾಂಕ್ಸ್” ಎಂದರು. ಅಲ್ಲದೇ “ಕೆಲವೇ ನಿಮಿಷಗಳ ಹಿಂದೆ ನಮ್ಮ ಹಾಡು ಪ್ರಪಂಚದ ಅಗ್ರಸ್ಥಾನದಲ್ಲಿ ನಿಂತಿದ್ದು ಖುಷಿ ಆಯಿತು. ನನಗೆ ಬಹಳ ಹೆಮ್ಮೆ ಆಗುತ್ತಿದೆ. ನಮ್ಮ ದೇಶ, ನಮ್ಮ ತಂಡ, ಚಂದ್ರಬೋಸ್ ಸೇರಿದಂತೆ ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದು” ಎಂದು ಕೀರವಾಣಿ ಹೇಳಿದ್ರು.

ಮತ್ತೊಂದು ಕಡೆ ಗೀತ ಸಾಹಿತಿ ಅಂದ್ರೆ lyricist ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿ ಸಂಭ್ರಮ ಪಟ್ಟರು. “ನಮಸ್ತೆ” ಎನ್ನುತ್ತಲೇ ಮಾತು ಆರಂಭಿಸಿದ ಚಂದ್ರ ಬೋಸ್ ಅವರು “ತೆಲುಗು ಭಾಷೆಯಲ್ಲಿ 56 ಅಕ್ಷರಗಳಿವೆ. ಸಾಕಷ್ಟು ಪದಗಳು, ಸಾಕಷ್ಟು ಭಾವಗಳು ನಮ್ಮ ಭಾಷೆಗಿದೆ. ನಮ್ಮದು ಬಹಳ ಶ್ರೇಷ್ಠವಾದ ಭಾಷೆ, ಸಂಗೀತಮಯ ಭಾಷೆ. ಒಂದು ಸಾಮಾನ್ಯ ಪದ ಬರೆದರು ಅದು ಸಂಗೀತದಂತೆ ಕೇಳುತ್ತದೆ. RRR ಚಿತ್ರದ ನಾಟು ನಾಟು ಹಾಡಿನ ಅರ್ಥವನ್ನು ತೆಲುಗು ಭಾಷಿಕರು ಇಷ್ಟಪಡುತ್ತಾರೆ. ಆದರೆ ಪರಭಾಷಿಕರು ಹಾಡಿನ ಸೌಂಡಿಂಗ್‌ ಇಷ್ಟಪಡುತ್ತಾರೆ. ಅದರಿಂದ ಈ ಪ್ರಶಸ್ತಿ ಸಿಕ್ತು. ಬೇಗ ಭಾರತಕ್ಕೆ ಹೋಗಿ ಹೆಂಡತಿ ಮಕ್ಕಳಿಗೆ ಪ್ರಶಸ್ತಿ ತೋರಿಸಬೇಕು ಎನ್ನುವುದು ನನ್ನ ಆಸೆ” ಅಂತ ಮಾದ್ಯಮಗಳಿಗೆ ಹೇಳಿದ್ರು.

ಇನ್ನು ಈಗಾಗಲೇ ಹಲವು ಇಂಟರ್ನ್ಯಾಷನಲ್ ಅವಾರ್ಡ್ ಗಳನ್ನ ಪಡೆದುಕೊಂಡಿರುವ RRR ಸಿನಿಮಾ ಮೊನ್ನೆಯಷ್ಟೇ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿಯನ್ನೂ ಕೂಡ ಬಾಚಿಕೊಂಡಿತ್ತು. ಈಗ ಆಸ್ಕರ್ ಗೆಲ್ಲುವ ಮೂಲಕ ಇಡೀ ದೇಶ ಹೆಮ್ಮೆ ಪಡುವಂಥ ಕೆಲಸವನ್ನ ಸಿನಿಮಾ ತಂಡ ಸಾಧಿಸಿದೆ. ಅಂದಹಾಗೆ ಈ ಹಾಡಿನ ಸಿಂಗರ್ಸ್ ಗಳಾದ ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವ ಆಸ್ಕರ್ ವೇದಿಕೆಯಲ್ಲಿ ‘ನಾಟು ನಾಟು’ ಸಾಂಗ್ ಲೈವ್ ಆಗಿ perform ಕೂಡ ಮಾಡಿದ್ರು. ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಿಗ್ಗಜ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಬಹುತೇಕ ಜನರು ಶಹಭಾಷ್ ಎಂದಿದ್ದಾರೆ.

ಇನ್ನು ‘ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್’ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿರುವ ‘ದಿ ಎಲಿಫೆಂಟ್ ವಿಸ್ಪರಸ್’ ಡಾಕ್ಯುಮೆಂಟರಿಗೆ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನ ಚಿತ್ರೀಕರಿಸೋಕೆ ನಿರ್ದೇಶಕರು 5 ವರ್ಷ ತೆಗೆದುಕೊಂಡಿದ್ರು. ಅವರ ಕಷ್ಟಕ್ಕೆ ಪ್ರತಿಫಲ ಎಂಬಂತೆ ಈ ಚಿತ್ರಕ್ಕೆ ಈಗ ಆಸ್ಕರ್‌ ಅವಾರ್ಡ್‌ ಬಂದಿದೆ. ‘ದಿ ಎಲಿಫೆಂಟ್ ವಿಸ್ಪರಸ್’ ” ಮತ್ತು “ಆಲ್‌ ದಟ್‌ ಬ್ರೀತ್ಸ್‌” ಈ 2 ಚಿತ್ರಗಳು “ಉತ್ತಮ ಸಾಕ್ಶ್ಯ ಚಿತ್ರ” ಎಂಬ ಕೆಟಗರಿಗೆ ಭಾರತದಿಂದ ನೋಮಿನೇಟ್ ಆಗಿದ್ವು. ಕೊನೆಗೆ “ಆಲ್‌ ದಟ್‌ ಬ್ರೀತ್ಸ್‌” ನ್ನ ಔಟ್‌ ಮಾಡಿ ‘ದಿ ಎಲಿಫೆಂಟ್ ವಿಸ್ಪರಸ್’ ಪ್ರೈಸ್‌ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಚಿತ್ರ ಆನೆಯ ಕತೆಯನ್ನ ಹೇಳತ್ತೆ.

ಬಡ ಕುಟುಂಬದ ದಂಪತಿಗಳು ಗಾಯಗೊಂಡಿದ್ದ ಅನೆ ಮರಿಯನ್ನ ಸಾಕೋಕೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿ ಇಟ್ಟಿರ್ತಾರೆ. ಆನೆಗಳ ಜೊತೆ ಮಾನವರ ಸಂಬಂಧ ಅಥವಾ ಆನೆ ಸಾಕುವವರ ಜೊತೆ ಪ್ರಾಣಿಗಳ ಸಂಬಂಧ, ಪ್ರಾಣಿಗಳ ಭಾವನೆಗಳು, ಮತ್ತು ಅವುಗಳ ಒಡನಾಟದ ಬಗ್ಗೆ ಈ ಚಿತ್ರ ರೆಡಿಯಾಗಿದೆ. ಈ ಶಾರ್ಟ್ ಡಾಕ್ಯೂಮೆಂಟರಿ 41 ನಿಮಿಷವಿದೆ. ಇದು ಕಾರ್ತಿಕಿಯವರ ಮೊದಲ ನಿರ್ದೇಶನದ ಶಾರ್ಟ್ ಡಾಕ್ಯೂಮೆಂಟರಿ ಆಗಿದೆ. ಪ್ರಶಸ್ತಿ ಸ್ವೀಕರಿಸಿದ ಕಾರ್ತಿಕಿ ಗೊನ್ಸಾಲ್ವೆಸ್ “ನಾನು ಇಲ್ಲಿ ಇವತ್ತು ನಮ್ಮ ಮತ್ತು ನಮ್ಮ ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಂಧದ ಬಗ್ಗೆ ಮಾತನಾಡಲು ಬಂದಿದ್ದೇನೆ. ಸ್ಥಳೀಯ ಸಮುದಾಯದ ಗೌರವಕ್ಕೆ, ಉಳಿದ ಜೀವಿಗಳಿಗೆ ಸಹಾನುಭೂತಿ ತೋರಿಸಲು, ಸಹಬಾಳ್ವೆ ನಡೆಸಲು ಇಲ್ಲಿ ಬಂದಿದ್ದೇನೆ” ಅಂತ ಹೇಳುವ ಮೂಲಕ ತಮ್ಮ ಸಂತಸವನ್ನು ಹೊರಹಾಕಿದ್ದಾರೆ.

ಇನ್ನು ಈ ಬಾರಿಯ ಆಸ್ಕರ್ ಪ್ರಶಸ್ತಿಯ ಟ್ರೋಫಿ ಜೊತೆ ಕ್ಯಾಶ್ ಪ್ರೈಸ್ ಏನಾದ್ರೂ ಉಂಟ ಅಂತ ನೋಡೋದಾದ್ರೆ ಇಲ್ಲ ಈ ಬಾರಿ ನಗದು ಬಹುಮಾನ ಇಲ್ಲ, ಆದರೆ ಉಡುಗೊರೆಯ ರೂಪದಲ್ಲಿ ಅನೇಕ ವಸ್ತುಗಳು, ಪ್ರವಾಸ ಪ್ಯಾಕೇಜ್ ಗಳು ವಿಜೇತರಿಗೆ ಸಿಗುತ್ತವೆ. ಕೇವಲ ಪ್ರಶಸ್ತಿ ಗೆದ್ದವರಿಗೆ ಮಾತ್ರವಲ್ಲ, ನಾಮಿನೇಟ್ ಆದವರಿಗೂ ಕೂಡ ಉಡುಗೊರೆ ನೀಡಲಾಗತ್ತೆ ಅಂತ ಹೇಳಲಾಗಿದೆ. ಜೊತೆಗೆ ಈ ಬಾರಿ ಗಿಫ್ಟ್ ಬಾಕ್ಸ್ ನಲ್ಲಿ 1 ಲಕ್ಷ ಡಾಲರ್ ಮೌಲ್ಯದ ಉಡುಗೊರೆಗಳು ಇವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪೀಸೆಸ್ ಆಫ್ ಆಸ್ಟ್ರೇಲಿಯಾ ಹೆಸರಿನ ಕಂಪೆನಿಯೊಂದು ನಾಮ ನಿರ್ದೇಶನಗೊಂಡವರಿಗೆ ಆಸ್ಟ್ರೇಲಿಯಾದಲ್ಲಿ ಒಂದು ಚದರ ಮೀಟರ್ ಭೂಮಿ ಕೊಡಲು ಮುಂದಾಗಿದೆಯಂತೆ ಅಂತ ಸುದ್ದಿ ಕೂಡಾ ಇದೆ.

-masthmagaa.com

Contact Us for Advertisement

Leave a Reply