ಮೀಟೂ ಆರೋಪ ಮಾಡಿದ್ದ ಚೀನಾ ಟೆನ್ನಿಸ್ ಆಟಗಾರ್ತಿ ನಾಪತ್ತೆ!

masthmagaa.com:

ಚೀನಾದ ಟೆನ್ನಿಸ್ ಆಟಗಾರ್ತಿ ಪೆಂಗ್ ಶುಯ್​ ನಾಪತ್ತೆ ಬಗ್ಗೆ ಟೆನ್ನಿಸ್ ಆಟಗಾರ ನೊವಾಕ್ ಜೊಕೋವಿಕ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪೆಂಗ್ ಶುಯ್​ ಚೀನಾದ ಪ್ರಭಾವಿ ರಾಜಕಾರಣಿಯೊಬ್ಬರ ವಿರುದ್ಧ ಮೀಟೂ ಆರೋಪ ಮಾಡಿದ್ರು. ಚೀನಾದ ಮಾಜಿ ಉಪಪ್ರಧಾನಿ ಝಂಗ್ ಗವೊಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಆರೋಪಿಸಿದ್ರು. ಇದಾದ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಚೀನಾ ಅಧಿಕಾರಿಗಳು ಕೂಡ ಪೆಂಗ್ ಶುಯ್ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಜೊತೆಗೆ ಚೀನಾದಲ್ಲಿ ಇಂಟರ್​ನೆಟ್​​ನಿಂದಲೂ ಆಕೆಯ ಆರೋಪಗಳನ್ನು ತೆಗೆದು ಹಾಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಜೊಕೋವಿಕ್​, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಒಂದು ವಾರದ ಹಿಂದೆ ಈ ಬಗ್ಗೆ ಮಾಹಿತಿ ಸಿಕ್ಕಿತು. ನಿಜವಾಗ್ಲೂ ಆಕೆ ನಾಪತ್ತೆಯಾಗಿರೋದು ಶಾಕಿಂಗ್ ವಿಚಾರ. ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಅಂತ ಭಾವಿಸ್ತೀನಿ. ಆಕೆ ನಾಪತ್ತೆಯಾಗಿರೋದ್ರಿಂದ ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮ ಬೀರಿರಬಹುದು ಅನ್ನೋದನ್ನ ನಾನು ಊಹಿಸಬಲ್ಲೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply