ಮಾದಕ ವಸ್ತು ಸೇವಿಸೋ ಪ್ರವಾಸಿಗರೇ ನಮಗೆ ಬೇಡ: ಗೋವಾ ಸಚಿವ

masthmagaa.com:

ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಕ್ರೂಸ್​ಶಿಪ್​ನಲ್ಲಿ ನಶೆ ಪಾರ್ಟಿ ಮಾಡೋಕೆ ಹೋಗಿ ಸಿಕ್ಕಾಕ್ಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅಂದ್ಹಾಗೆ ಈ ಕ್ರೂಸ್​ಶಿಪ್​ ಮುಂಬೈನಿಂದ ಗೋವಾಗೆ ಹೊರಟಿತ್ತು. ಅಂದ್ಹಾಗೆ ಗೋವಾ ಒಂಥರಾ ಪ್ರವಾಸಿಗರ ಸ್ವರ್ಗ ಇದ್ದಂತೆ. ಇಂಥಾ ಗೋವಾಗೆ ಆದಾಯದ ಪ್ರಮುಖ ಮೂಲ ಅಂದ್ರೆ ಅದು ಟೂರಿಸಂ- ಪ್ರವಾಸೋದ್ಯಮ. ಸೋ ಪ್ರವಾಸಕ್ಕೆ ಬರೋರು ಮಾದಕವಸ್ತು ತಗೊಂಡ್​ ಬಂದ್ರೆ ಅಥವಾ ಗೋವಾದಲ್ಲಿ ಮಾದಕವಸ್ತು ಸೇವಿಸೋಣ ಅಂತ ಬಂದ್ರೆ ಅದನ್ನ ತಡೆಯಲು ನೀವು ಏನ್ ಮಾಡ್ತೀರಿ ಅಂತ ಕೇಳಿದ ಪ್ರಶ್ನೆಗೆ ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್​ ಅಜ್​ಗಾಂವ್ಕರ್​, ಮಾದಕ ವಸ್ತು ತಗೊಳ್ಳೋ ಜನರೇ ನಮ್ಗೆ ಬೇಡ. ಪ್ರವಾಸಿಗರು ಯಾರಾದ್ರೂ ಮಾದಕ ವಸ್ತು ಸೇವಿಸೋದು ಗೊತ್ತಾದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply