ತೈವಾನ್ ಏಕಾಂಗಿಯಲ್ಲ, ನಾವಿದ್ದೀವಿ ಎಂದ ಯೂರೋಪಿಯನ್ ಒಕ್ಕೂಟ!

masthmagaa.com:

ತೈವಾನ್ ಮತ್ತು ಚೀನಾ ನಡುವಿನ ಸಂಘರ್ಷದ ನಡುವೆಯೇ ಯೂರೋಪಿಯನ್ ಒಕ್ಕೂಟದ ಪಾರ್ಲಿಮೆಂಟರಿ ಡೆಲಿಗೇಷನ್ ಒಂದು ತೈವಾನ್​​ಗೆ ಭೇಟಿ ನೀಡಿದೆ. ಈ ವೇಳೆ ತೈವಾನ್ ಏಕಾಂಗಿಯಲ್ಲ. ನಾವೆಲ್ಲರೂ ತೈವಾನ್ ಜೊತೆಗೆ ಇದ್ದೀವಿ. ತೈವಾನ್ ಮತ್ತು ಯೂರೋಪಿಯನ್ ಒಕ್ಕೂಟದ ನಡುವಿನ ಸಂಬಂಧ ವೃದ್ಧಿಸಲು ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಈ ಭೇಟಿ ಮೊದಲ ಹೆಜ್ಜೆ ಅಷ್ಟೆ ಅಂತ ನಿಯೋಗದ ಮುಖ್ಯಸ್ಥ, ಫ್ರಾನ್ಸ್ ಮೂಲದ ರಫಾಲ್ ಗ್ಲಕ್ಸ್​​ಮನ್​ ಹೇಳಿದ್ದಾರೆ. ತೈವಾನ್​​​​​ ಸದ್ಯ ವ್ಯಾಟಿಕನ್ ಸಿಟಿ ಹೊರತುಪಡಿಸಿ ಯೂರೋಪಿಯನ್ ಒಕ್ಕೂಟದ ಯಾವುದೇ ಸದಸ್ಯ ದೇಶಗಳ ಜೊತೆಗೆ ಒಪ್ಪಂದಗಳನ್ನು ಹೊಂದಿಲ್ಲ. ಆದ್ರೂ ಕೂಡ ಈ ದೇಶಗಳ ಜೊತೆಗೆ ಉತ್ತಮ ಸಂಬಂಧ ಹೊಂದಲು ತೈವಾನ್​​ಗೆ ತುಂಬಾ ಆಸಕ್ತಿ ಇದೆ.

ಮತ್ತೊಂದ್ಕಡೆ ಅಮೆರಿಕದ ಜಾಯಿಂಟ್ ಚೀಫ್ಸ್​ ಚೇರ್​ಮನ್​​ ಮಾರ್ಕ್​ ಮಿಲ್ಲೇ ಕೂಡ ಚೀನಾಗೆ ಚುಚ್ಚೋ ಮಾತಾಡಿದ್ದಾರೆ. ಅಮೆರಿಕದ ಸೇನೆ ಚೀನಾದ ದಾಳಿಯಿಂದ ತೈವಾನ್​​ನ್ನು ರಕ್ಷಿಸಲು ಸಮರ್ಥವಾಗಿದೆ ಅಂತ ಹೇಳಿದ್ದಾರೆ. ಆದ್ರೆ ಮುಂದಿನ 24 ತಿಂಗಳ ಕಾಲದ ಮಟ್ಟಿಗಂತೂ ಚೀನಾ ತೈವಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳೋದಿಲ್ಲ ಅಂತ ಹೇಳಿದಾಗ ಮಾಧ್ಯಮದವರು ಒಂದ್ವೇಳೆ ದಾಳಿ ಮಾಡಿದ್ರೆ ರಕ್ಷಿಸ್ತೀರಾ ಅಂತ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಮಿಲ್ಲೇ, ಅದ್ರಲ್ಲಿ ಯಾವುದೇ ಅನುಮಾನವೇ ಬೇಡ. ಅಮೆರಿಕ ಇಡೀ ವಿಶ್ವದಲ್ಲಿ ಏನು ಬೇಕಾದ್ರೂ ಮಾಡೋ ತಾಕತ್ತು ಹೊಂದಿದೆ. ಅದೇ ರೀತಿ ಚೀನಾದಿಂದ ತೈವಾನ್​​ನ್ನು ಕೂಡ ರಕ್ಷಿಸ್ತೀವಿ ಅಂತ ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಇದೇ ಮಾತು ಹೇಳಿದ್ರು. ಆದ್ರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಚೀನಾ, ಅಮೆರಿಕ ತಾನು ಆಡಿದ ಮಾತಿನಂತೆ ನಡೆದುಕೊಳ್ಳಬೇಕು ಅಂತ ಕಿಡಿಕಾರಿತ್ತು. ಅಂದಹಾಗೆ ಈ ಹಿಂದೆ ಅಮೆರಿಕದಲ್ಲಿ 1979ರಲ್ಲಿ ತೈವಾನ್ ರಿಲೇಷನ್ ಆಕ್ಟ್​ ಅಂತ ಒಂದು ಕಾಯ್ದೆ ಪಾಸ್ ಮಾಡಲಾಗಿತ್ತು. ಅದ್ರ ಪ್ರಕಾರ ಅಮೆರಿಕ ತೈವಾನ್​​ಗೆ ಮಿಲಿಟರಿ ಅಭಿವೃದ್ಧಿಯಲ್ಲಿ ಸಹಕರಿಸಬಹುದು. ಆದ್ರೆ ಯುದ್ಧದ ವೇಳೆ ತೈವಾನ್​​ ಸಹಾಯಕ್ಕೆ ಬರೋದಿಲ್ಲ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply