“ಕಾಂತಾರ”ದ ಬ್ಯೂಟಿ “ಯುವ”ಗೆ ನಾಯಕಿ

masthmagaa.com:

ಸೆನ್ಸೆಷನ್‌ ಕ್ರೀಯೆಟ್‌ ಮಾಡಿದ ಯುವ ಮೂವಿ ಟೀಸರ್‌, ಯಾರ್‌ ನೋಡಿಲ್ಲ ಹೇಳಿ. ಎಲ್ಲರೂ ನೋಡಿರ್ತಾರೆ. ಈ ಸಿನಿಮಾಗೆ “ಕಾಂತಾರ”ದ ಬ್ಯೂಟಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ ಅನ್ನೋ ಮಾಹಿತಿಯನ್ನ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ತಿಳಿಸಿದೆ. “ಯುವ” ಚಿತ್ರದ ಮೂಲಕ ಬೆಳ್ಳಿತೆರೆನ ಧೂಳ್‌ ಮಾಡೋಕೆ ಬರ್ತಾ ಇರೋ ಯುವ ರಾಜ್ ಕುಮಾರ್‌ ಜೊತೆ ಕಾಂತಾರದ ಸಿಂಗಾರ ಸಿರಿ ಸಪ್ತಮಿ ಗೌಡ ಅವರು ನಟಿಸ್ತಾರೆ. ಯುವ ರಾಜ್‌ ಕುಮಾರ್‌ ಖದರ್‌ಗೆ ಯಾರಪ್ಪ ಹೀರೋಯಿನ್‌ ಅನ್ನೋದು ಎಲ್ಲಾ ಫ್ಯಾನ್ಸ್‌ಗಳಿಗೂ ತಲೆ ಹಾಳ್‌ ಮಾಡಿದಂತ ಪ್ರಶ್ನೆ ಆಗಿತ್ತು. ಆದರೆ ಇವಾಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಪ್ತಮಿ ಗೌಡ ದೊಡ್ಮನೆ ಕುಡಿಯ ಮೊದಲ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಯುವರಾಜನ ಅರಸಿಗೆ ಆದರದ ಸ್ವಾಗತ ಅಂತ ಹೊಂಬಾಳೆ ಫಿಲ್ಮ್ಸ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನ ಬಹಿರಂಗ ಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply