ಫಿಟ್ನೆಸ್ ಪಾಸಾದ್ರೂ ಅವಕಾಶ ಕೊಡಲಿಲ್ಲ: ಯುವಿ ನೋವಿನ ನುಡಿ

ಯೋ ಯೋ ಟೆಸ್ಟ್ ಪಾಸಾದ್ರೂ ನನ್ನನ್ನು ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ 8-9 ಪಂದ್ಯಗಳಲ್ಲಿ 2 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದೆ. ನಂತರ ಗಾಯಗೊಂಡಿದ್ದ ಪರಿಣಾಮ ಮುಂದಿನ ಶ್ರೀಲಂಕಾ ವಿರುದ್ಧದ ಸರಣಿಗೆ ಸಿದ್ಧರಾಗಲು ಸೂಚನೆ ಲಭಿಸಿತ್ತು. ಆದ್ರೆ ಈ ಮಧ್ಯೆ ಬಿಸಿಸಿಐ ಯೋ ಯೋ ಟೆಸ್ಟ್ ಕಡ್ಡಾಯ ಮಾಡಿಬಿಟ್ಟಿತು. ಇದು ನನ್ನ ಆಯ್ಕೆಗೆ ಯೂಟರ್ನ್ ಆಗಿ ಪರಿಣಮಿಸಿತ್ತು. ಯಾಕಂದ್ರೆ ಗಾಯದ ಸಮಸ್ಯೆಯಿಂದ ಗುಣವಾಗುತ್ತಿದ್ದಂತೆ ಯೋ ಯೋ ಟೆಸ್ಟ್ ಎದುರಿಸಬೇಕಾಯ್ತು. ಆದ್ರೂ ನಾನು ಯೋ ಯೋ ಟೆಸ್ಟ್‍ನಲ್ಲಿ ಭಾಗಿಯಾಗಿ, ಪಾಸ್ ಮಾಡಿದ್ದೆ. ಆದ್ರೂ ನನ್ನನ್ನು ವಿಶ್ವಕಪ್ ಟೂರ್ನಿಗೆ ಸೆಲೆಕ್ಟ್ ಮಾಡಲಿಲ್ಲ. ನಂತರ ನಿರಂತರವಾಗಿ ನನ್ನ ಕಡೆಗಣನೆ ಶುರುವಾಯ್ತು ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

17 ವರ್ಷ ಟೀಂ ಇಂಡಿಯಾಗಾಗಿ ಆಡಿದ್ದ ಯುವರಾಜ್ ಸಿಂಗ್ 2011ರ ವಿಶ್ವಕಪ್‍ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದರು. ಅಂದಹಾಗೆ ಫಿಟ್ನೆಸ್ ಟೆಸ್ಟ್ ಮಾಡಲು ಬಿಸಿಸಿಐ ನಡೆಸೋ ಪರೀಕ್ಷೆಯನ್ನು ಯೋ ಯೋ ಟೆಸ್ಟ್ ಅಂತ ಕರೆಯಲಾಗುತ್ತೆ.

Contact Us for Advertisement

Leave a Reply