ಪುಟಿನ್ ಜೊತೆ ಲಿಂಕ್ ಹೊಂದಿರೋ ಪಕ್ಷಗಳ ಮೇಲೆ ನಿಷೇಧ ಹೇರಿದ ಝೆಲೆನ್​ಸ್ಕಿ!

masthmagaa.com:

ರಷ್ಯಾ ಜೊತೆ, ರಷ್ಯಾ ಅಧ್ಯಕ್ಷ ಪುಟಿನ್​ ಜೊತೆ ಲಿಂಕ್ ಹೊಂದಿರೋ ಯುಕ್ರೇನ್​ನ 11 ರಾಜಕೀಯ ಪಕ್ಷಗಳ ಆ್ಯಕ್ಟಿವಿಟೀಸ್​ ಮೇಲೆ ಯುಕ್ರೇನ್​ ಅಧ್ಯಕ್ಷ ಝೆಲೆನ್ಸ್​ಕಿ ನಿಷೇಧ ಹೇರಿದ್ದಾರೆ. ಈ 11 ಪಕ್ಷಗಳಲ್ಲಿ ಅತಿದೊಡ್ಡ ಪಕ್ಷ ಅಂದ್ರೆ ಅದು ‘ಆಪೊಸಿಷನ್​ ಪ್ಲಾಟ್​ ಫಾರ್ಮ್​ ಫಾರ್ ಲೈಫ್’.. ಯುಕ್ರೇನ್​ ಸಂಸತ್​​ನ ಒಟ್ಟು 450 ಸೀಟುಗಳಲ್ಲಿ 44 ಸೀಟುಗಳನ್ನ ಹೊಂದಿದೆ ಈ ಪಕ್ಷ. ​ವಿಕ್ಟರ್ ಮೆಡ್ವೆಡ್​​ಚುಕ್​ ಇದರ ಮುಖ್ಯಸ್ಥ. ಇವರು ಪುಟಿನ್​​ ಜೊತೆ ಒಳ್ಳೇ ಸಂಬಂಧ ಹೊಂದಿದ್ದಾರೆ. ಇವರ ಮಗಳ ಗಾಡ್​ಫಾದರ್ ಅಂತಾನೇ ಪುಟಿನ್​ರನ್ನ ಪರಿಗಣಿಸಲಾಗುತ್ತೆ. ಇದೀಗ ಈ ಪಕ್ಷ ಮತ್ತು ಇತರ 10 ಪಕ್ಷಗಳ ಮೇಲೆ ಬ್ಯಾನ್​ ಹೇರಲಾಗಿದೆ. ಯುಕ್ರೇನ್​ನಲ್ಲಿ ಮಾರ್ಷಲ್​ ಲಾ ಇರೋವರೆಗೆ ನಿಷೇಧ ಜಾರಿಯಲ್ಲಿರುತ್ತೆ. ಅಂದ್ಹಾಗೆ ಝೆಲೆನ್ಸ್​ಕಿ ಸರ್ಕಾರವನ್ನ ಪತನಗೊಳಿಸಿ, ರಷ್ಯಾ ತನ್ನ ಕೈಗೊಂಬೆ ಸರ್ಕಾರವನ್ನ ಯುಕ್ರೇನ್​ನಲ್ಲಿ ಸ್ಥಾಪಿಸಲು ಪ್ರಯತ್ನಪಡ್ತಿರಬಹುದು ಅನ್ನೋ ಅನುಮಾನದ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply