2014ರಿಂದ 2019ರವರೆಗೆ ದಾಖಲಾದ ದೇಶದ್ರೋಹ ಪ್ರಕರಣ ಎಷ್ಟು?

masthmagaa.com:

ದೇಶದಲ್ಲಿ 2014ರಿಂದ 2019ರವರೆಗೆ ದೇಶದ್ರೋಹ ಸಂಬಂಧ 326 ಪ್ರಕರಣ ದಾಖಲಾಗಿದೆ. ಅದ್ರಲ್ಲಿ 6 ಮಂದಿ ಮಾತ್ರ ತಪ್ಪಿತಸ್ಥರೆಂದು ಸಾಬೀತಾಗಿದೆ. ಕೇಂದ್ರ ಗೃಹ ಇಲಾಖೆಯೇ ಈ ಬಗ್ಗೆ ಮಾಹಿತಿ ನೀಡಿದೆ. ಇನ್ನೊಂದು ವಿಚಾರ ಅಂದ್ರೆ 326 ಪ್ರಕರಣಗಳಲ್ಲಿ 141ರಲ್ಲಿ ಮಾತ್ರವೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಈ ಅವಧಿಯಲ್ಲಿ 22 ದೇಶದ್ರೋಹದ ಪ್ರಕರಣ ದಾಖಲಾಗಿದ್ದು, 17ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಒಂದು ಪ್ರಕರಣದಲ್ಲಿ ಮಾತ್ರ ವಿಚಾರಣೆ ಮುಗಿದಿದೆ. ಕರ್ನಾಟಕದಲ್ಲಿ ಈವರೆಗೆ ಯಾರೂ ಕೂಡ ತಪ್ಪಿತಸ್ಥ ಅಂತ ಸಾಬೀತಾಗಿಲ್ಲ

-masthmagaa.com

Contact Us for Advertisement

Leave a Reply