ರಾಜ್ಯದಲ್ಲಿ ಕೊರೋನಾ ಆರ್ಭಟ.. ಮತ್ತೆ 36 ಮಂದಿಗೆ ಸೋಂಕು..!

masthmagaa.com:

ನಿನ್ನೆ ಒಂದೇ ದಿನ 48 ಹೊಸ ಪ್ರಕರಣಗಳು ದೃಢಪಟ್ಟು ದಾಖಲೆ ಬರೆದಿದ್ದ ರಾಜ್ಯದಲ್ಲಿ ಕೊರೋನಾ ಆರ್ಭಟ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಇವತ್ತು ಮತ್ತೆ 36 ಮಂದಿಯಲ್ಲಿ ಹೊಸದಾಗಿ ಕಾಯಿಲೆ ಪತ್ತೆಯಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ.

36 ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರ ಒಂದರಲ್ಲೇ 12 ಪ್ರಕರಣಗಳು ದೃಢಪಟ್ಟಿವೆ.

ಉತ್ತರ ಕನ್ನಡದ ಭಟ್ಕಳದಲ್ಲಿ 7 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 6 ಮಂದಿ ರೋಗಿ ನಂಬರ್ 659ರ (18 ವರ್ಷದ ಯುವತಿಯ) ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ.

ದಾವಣಗೆರೆಯಲ್ಲಿ 6 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಐವರು ರೋಗಿ ನಂಬರ್ 651ರ (48 ವರ್ಷದ ಮಹಿಳೆಯ) ಸಂಪರ್ಕಕಕ್ಕೆ ಬಂದವರಾಗಿದ್ದಾರೆ.

ಚಿತ್ರದುರ್ಗದ ಮೂವರಲ್ಲಿ ಸೋಂಕು ಪತ್ತಯಾಗಿದೆ. ಎಲ್ಲರೂ ಗುಜರಾತ್​ನ ಅಹಮದಾಬಾದ್​ಗೆ ಪ್ರಯಾಣ ಮಾಡಿದವರಾಗಿದ್ದಾರೆ.

ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ರೋಗಿ ನಂಬರ್ 578ರ (69 ವರ್ಷದ ವೃದ್ಧ) ಸಂಪರ್ಕಕ್ಕೆ ಬಂದವರಾಗಿದ್ದಾರೆ.

ಉಳಿದಂತೆ ಬೀದರ್​ನಲ್ಲಿ 3, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿ ಇದುವರೆಗೆ 30 ಮಂದಿ ಪ್ರಾಣ ಕಳೆದುಕೊಂಡಿದ್ದು, 379 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

-masthmagaa.com

Contact Us for Advertisement

Leave a Reply