masthmagaa.com:

ಜಗತ್ತಿನ ಅತಿ ದೊಡ್ಡ ಕೊರೋನಾ ಲಸಿಕೆಯ ಅಭಿಯಾನ ನಡೀತಿರೋ ಭಾರತದಲ್ಲಿ 4 ದಿನದಲ್ಲಿ (ಮಂಗಳವಾರ ಸಂಜೆವರೆಗೆ) 6.31 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಖುಷಿಯ ವಿಚಾರ ಅಂದ್ರೆ ಇದುವರೆಗೆ ಅತಿಹೆಚ್ಚು ಜನ ಲಸಿಕೆ ಪಡೆದಿರೋದು ನಮ್ಮ ಕರ್ನಾಟಕದಲ್ಲಿ. ಹೌದು, ಕರ್ನಾಟಕದಲ್ಲಿ ಇದುವರೆಗೆ 80,000ಕ್ಕೂ ಹೆಚ್ಚು ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಹಾಗಿದ್ರೆ ಅತಿ ಹೆಚ್ಚು ಲಸಿಕೆ ಹಾಕಿದ ಟಾಪ್-10 ರಾಜ್ಯಗಳನ್ನ ನೋಡೋದಾದ್ರೆ,

1. ಕರ್ನಾಟಕ: 80,000+

2. ತೆಲಂಗಾಣ: 69,000+

3. ಆಂಧ್ರಪ್ರದೇಶ: 58,000+

4. ಒಡಿಶಾ: 55,000+

5. ಪಶ್ಚಿಮ ಬಂಗಾಳ: 42,000+

6. ಬಿಹಾರ: 42,000+

7. ರಾಜಸ್ಥಾನ: 30,000+

8. ಮಹಾರಾಷ್ಟ್ರ: 30,000+

9. ತಮಿಳುನಾಡು: 25,000+

10. ಹರಿಯಾಣ: 24,000+

-masthmagaa.com

Contact Us for Advertisement

Leave a Reply