ಹೇ ಪಾಕಿಸ್ತಾನ ನಿನಗೆ ಕರುಣೆನೇ ಇಲ್ವಾ?

masthmagaa.com:

ಪಕ್ಕದ ಪಾಕಿಸ್ತಾನದಿಂದ ಮನುಕುಲವೇ ಬೆಚ್ಚಿಬೀಳುವ ವಿಚಾರವೊಂದು ಹೊರಬಿದ್ದಿದೆ. ಇಲ್ಲಿ 8 ವರ್ಷದ ಮಗುವೊಂದಕ್ಕೆ ಮರಣದಂಡನೆ ಶಿಕ್ಷೆ ಎದುರಾಗೋ ಸಾಧ್ಯತೆ ಇದೆ. ಯಾಕಂದ್ರೆ ಆ ಮಗು ಮೇಲೆ ಧರ್ಮ ನಿಂದನೆಯ ಕೇಸ್ ಹಾಕಿ, ತನಿಖೆ ನಡೆಸಲಾಗ್ತಿದೆ. ಈ ಕೇಸ್​​ನಲ್ಲಿ ವಿಚಾರಣೆ ಎದುರಿಸುತ್ತಿರುವ ಅತ್ಯಂತ ಚಿಕ್ಕ ಮಯಸ್ಸಿನ ಜೀವ ಇದಾಗಿದೆ. ಈ ಮಗು ಹೆಸರು ಏನು ಅಂತ ಇನ್ನೂ ಬಹಿರಂಗಪಡಿಸಿಲ್ಲ. ಅಂದಹಾಗೆ ಈ ಮಗು ರಹೀಂ ಯಾರ್ ಖಾನ್​​ ಜಿಲ್ಲೆಯ ಭೊಂಗ್​​​​ ಪ್ರದೇಶದಲ್ಲಿ ಮದರಸಾ ಒಳಗೆ ಹೋಗಿತ್ತು. ಅಲ್ಲಿ ಮೂತ್ರ ವಿಸರ್ಜನೆ ಮಾಡಿತ್ತು. ಇದ್ರಿಂದ ಕೆರಳಿದ ಕೆಲ ಕಟ್ಟರ್​ಪಂಥಿಗಳು ಧರ್ಮ ನಿಂದನೆಯ ಆರೋಪ ಮಾಡಿದ್ಧಾರೆ. ಮಗುವನ್ನು ಅರೆಸ್ಟ್ ಮಾಡಿ, ನಂತರದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದ್ರಿಂದ ಸಿಟ್ಟಾಗಿದ್ದ ಕೆಲ ಕಟ್ಟರ್​ಪಂಥಿ ದುಷ್ಕರ್ಮಿಗಳು ಈ ಭಾಗದ ಗಣಪತಿ ದೇಗುಲಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಹೀಗಾಗಿ ಆ ಮಗು ಮತ್ತು ಪೋಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋರ್ಟ್​​ನಲ್ಲಿ ಈ ಪ್ರಕರಣದ ವಿಚಾರಣೆ ನಡೀತಿದ್ದು, ಆರೋಪ ಸಾಬೀತಾದ್ರೆ ಮರಣ ದಂಡನೆ ಶಿಕ್ಷೆ ನೀಡಲು ಕೂಡ ಈ ಕಾನೂನಿನಲ್ಲಿ ಅವಕಾಶ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಲ್ಲಿನ ಸ್ಥಳೀಯರು, ಪಾಪ.. ಆ ಮಗುವಿಗೆ ಧರ್ಮ ನಿಂದನೆ ಅಂದ್ರೆ ಏನಂತಾನೇ ಗೊತ್ತಿಲ್ಲ. ಯಾಕೆ ಅರೆಸ್ಟ್ ಮಾಡಿದ್ದಾರೆ ಅನ್ನೋದೇ ಗೊತ್ತಿಲ್ಲ ಅಂತ ಹೇಳಿದ್ದಾರೆ. ಮಕ್ಕಳು ದೇವರಿಗೆ ಸಮಾನ ಅಂತಾರೆ.. ಆದ್ರೆ ಇಲ್ಲಿ ಆ ಮಗುವನ್ನೇ ಕಂಬಿ ಹಿಂದೆ ಇಟ್ಟು ವಿಚಾರಣೆ ನಡೆಸ್ತಿದ್ದಾರೆ. ಈ ದೇಶದ ಕಿಡಿಗೇಡಿಗಳ ಮನಸ್ಥಿತಿ ಎಂಥದ್ದು ಅಂತ ಇದ್ರಿಂದಾನೇ ಗೊತ್ತಾಗುತ್ತೆ. ಈಗ ರಹೀಂ ಯಾರ್ ಖಾನ್​​ನಲ್ಲಿ ಗಲಾಟೆಯಾಗಿದ್ದರಿಂದ ಇಲ್ಲಿ ಅರೆಸೇನಾಪಡೆ ನಿಯೋಜಿಸಲಾಗಿದೆ. ಹಲವು ಹಿಂದೂ ಕುಟುಂಬಗಳು ಆತಂಕದಲ್ಲಿದ್ದು, ಮನೆ ಬಿಟ್ಟು ಹೋಗೋಕೆ ಶುರು ಮಾಡಿದ್ದಾರೆ. ಅಂದಹಾಗೆ ಈ ಕಾನೂನಿನ ಅಡಿಯಲ್ಲಿ ಅರೆಸ್ಟ್ ಮಾಡಲಾಗ್ತಿರೋದು, ಆರೋಪ ಹೊರಿಸ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂಥ ಅದೆಷ್ಟೋ ಘಟನೆಗಳು ವರದಿಯಾಗಿವೆ. ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ ಅನ್ನೋ ಆರೋಪ ಮೊದಲಿಂದಲೂ ಇದೆ. ಇನ್ನು ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ದೇಗುವಲನ್ನು ನವೀಕರಣಗೊಳಿಸಿ, ಹಿಂದೂ ಸಮುದಾಯಕ್ಕೆ ಒಪ್ಪಿಸಲಾಗಿದೆ.

-masthmagaa.com

Contact Us for Advertisement

Leave a Reply