masthmagaa.com:
ದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ಮುಂದುವರಿದಿದ್ದು, ಜನ ಕೇಂದ್ರ ಸರ್ಕಾರದ ವಿರುದ್ಧ ಕೆಂಡವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಿಸೈನ್ ಮೋದಿ ಅನ್ನೋ ಹ್ಯಾಷ್ ಟ್ಯಾಗ್ ಫುಲ್ ಟ್ರೆಂಡಿಂಗ್ನಲ್ಲಿ ಇದೆ. ಆದ್ರೆ ನಿನ್ನೆ ಫೇಸ್ಬುಕ್ ಈ ಹ್ಯಾಷ್ಟ್ಯಾಗ್ನ್ನು ಬ್ಲಾಕ್ ಮಾಡಿತ್ತು. ಈ ಹ್ಯಾಷ್ಟ್ಯಾಗ್ ರಿಸೈನ್ ಮೋದಿ ಅಂತ ಹಾಕಿ ಸರ್ಚ್ ಮಾಡಿದ್ರೆ, ಈ ಪೋಸ್ಟ್ನ್ನು ಹೈಡ್ ಮಾಡಲಾಗಿದೆ. ಇದು ನಮ್ಮ ಕಮ್ಯೂನಿಟಿ ಸ್ಟಾಂಡರ್ಡ್ಸ್ಗೆ ವಿರುದ್ಧವಾಗಿದೆ ಅಂತ ಬರ್ತಾ ಇತ್ತು.
ಫೇಸ್ಬುಕ್ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಯ್ತು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಹ್ಯಾಷ್ಟ್ಯಾಗ್ ಬ್ಲಾಕ್ ಮಾಡಿದ್ದಾರೆ ಅಂತೆಲ್ಲಾ ಆರೋಪ ಕೇಳಿ ಬಂತು. ಫೇಸ್ಬುಕ್ ಬಗ್ಗೆ ಟ್ವಿಟ್ಟರ್ನಲ್ಲಿ ಟೀಕೆಗಳ ಸುರಿಮಳೆಯಾಯ್ತು. ವಿವಾದ ಜೋರಾದ ಕೂಡಲೇ ಬ್ಲಾಕ್ ತೆರವುಗೊಳಿಸಿ ಪ್ರತಿಕ್ರಿಯಿಸಿದ ಫೇಸ್ಬುಕ್, ಅದು ಮಿಸ್ ಆಗಿ ಬ್ಲಾಕ್ ಆಗಿದ್ದು.. ಬ್ಲಾಕ್ ಮಾಡಿ ಅಂತ ನಮಗೆ ಕೇಂದ್ರ ಸರ್ಕಾರ ಹೇಳಿಲ್ಲ ಅಂತ ಸ್ಪಷ್ಟಪಡಿಸಿದೆ.
-masthmagaa.com
Contact Us for Advertisement