masthmagaa.coom:
ತಮ್ಮ ಪುಸ್ತಕ ಸನ್ರೈಸ್ ಒವರ್ ಅಯೋಧ್ಯಾ: ನೇಷನ್ಹುಡ್ ಇನ್ ಅವರ್ ಟೈಮ್ಸ್ಗೆ ಟೀಕೆ ಕೇಳಿ ಬಂದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಪ್ರತಿಕ್ರಿಯಿಸಿದ್ದಾರೆ. ನಾನು ಇಂಗ್ಲಿಷ್ನಲ್ಲಿ ಪುಸ್ತಕ ಬರೆದಿದ್ದೀನಿ. ಸಿಮಿಲರ್ ಅನ್ನೋ ಪದ ಯೂಸ್ ಮಾಡಿದ್ದೀನಿ. ಸೇಮ್ ಅನ್ನೋ ಪದ ಯೂಸ್ ಮಾಡಿಲ್ಲ.. ಟೀಕಿಸುವವರು ಇಂಗ್ಲೀಷ್ನಲ್ಲಿ ವೀಕ್ ಇರಬೇಕು. ಅನುವಾದ ಮಾಡಿದ್ರೆ ಅಂಥವರಿಗೆ ಕ್ಲಾರಿಟಿ ಸಿಗಬಹುದು ಅಂತ ಹೇಳಿದ್ದಾರೆ. ಅಂದಹಾಗೆ ಇತ್ತೀಚೆಗೆ ಸಲ್ಮಾನ್ ಖುರ್ಷೀದ್ ಅವರ ಪುಸ್ತಕದಲ್ಲಿ ಹಿಂದುತ್ವ ಮತ್ತು ಉಗ್ರ ಸಂಘಟನೆಗಳು ಎರಡೂ ಒಂದೇ ಅಂತ ಹೇಳಲಾಗಿದೆ ಅಂತ ಬಿಜೆಪಿ ಆರೋಪಿಸಿತ್ತು. ಆದ್ರೆ ಖುರ್ಷೀದ್ ಈಗ ಒಂದೇ ಅಂತ ನಾನು ಹೇಳಿಲ್ಲ.. ಆ ರೀತಿ ಅಂತ ಹೇಳಿದ್ದೀನಿ ಅಷ್ಟೆ ಅಂತ ಜಾರಿಕೊಂಡಿದ್ದಾರೆ.
-masthmagaa.com
Contact Us for Advertisement