ಯಪ್ಪಾ! ಅಯ್ಯೋ! ಇದೆಂಥಾ ಹೋಲ್ ಗುರೂ!

masthmagaa.com:

ಇಲ್ಲಿ ಕಾಣ್ತ ಇರೋ ಈ ದೊಡ್ಡ ಹೊಂಡವನ್ನ ನೋಡ್ತಾ ಇದ್ರೆ, ನಿಮಗೆ ಯಾವುದೋ ಒಂದು ಬಾಹ್ಯಾಕಾಶ ನೌಕೆ ಬಂದು ಬಿದ್ದಿರ್ಬೋದು ಅಂತ ಅನಿಸ್ಬೋದು. ಆದ್ರೆ ಇದು ಆ ತರಹದ ಹೊಂಡ ಏನು ಅಲ್ಲ. ಇದು ಮಧ್ಯ ಮೆಕ್ಸಿಕೋದ, ಪ್ಯೂಬ್ಲಾ ರಾಜ್ಯದ, ಕೃಷಿ ಭೂಮಿಯಲ್ಲಿ ಕಾಣಿಸಿಕೊಂಡಿರುವ ದೊಡ್ಡಗಾತ್ರದ ಸಿಂಕ್‌ ಹೋಲ್ ಅಂದ್ರೆ ಮುಳುಗು ಗುಂಡಿ.‌ ಇದು ಮೊದಲ ಬಾರಿಗೆ ಕಾಣಿಸಿಕೊಂಡಾಗ ಕೆಲವೇ ಮೀಟರ್‌ಗಳಷ್ಟು ದೊಡ್ಡದಿತ್ತು. ಆದ್ರೆ ಈಗ ಇದು 60ಮೀಟರ್‌ಗಳಷ್ಟು ದೊಡ್ಡದಾಗಿದೆ. ಇದರ ಸುತ್ತಮುತ್ತಲಿನ ಮನೆಯವರೆಲ್ಲ ಖಾಲಿಮಾಡಿದ್ದಾರೆ. ಇದರ ಬಳಿ ಯಾರು ಹೋಗದಂತೆ ಮೆಕ್ಸಿಕೊ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಿಂಕ್‌ ಹೋಲ್‌ ಹೇಗೆ ಸೃಷ್ಟಿ ಆಗುತ್ತೆ ಅಂದ್ರೆ, ಮಳೆ ನೀರು ಭೂಮಿಯಲ್ಲಿ ಇಂಗೋ ಸಂದರ್ಭದಲ್ಲಿ, ಕಾರ್ಬನ್ ಡೈ ಆಕ್ಸೈಡ್‌ ಅನ್ನು, ಅಬ್ಸಾರ್ಬ್‌ ಮಾಡುತ್ತಾ ಇಂಗುತ್ತೆ. ಇದರಿಂದ ನೀರು ಸಣ್ಣ ಪ್ರಮಾಣದ ಆಸಿಡಿಕ್‌ ಗುಣವನ್ನ ಹೊಂದುತ್ತೆ. ಭೂಮಿಯಲ್ಲಿರುವಂತ ಸಣ್ಣ ಅಥವಾ ದೊಡ್ಡ ಬಿರುಕುಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ಈ ನೀರು ಸಾಗಿ ಭೂಮಿಯ ಕೆಳಪದರವನ್ನ ತಲುಪುತ್ತೆ. ಭೂಮಿಯಲ್ಲಿ ಕೆಲವೊಮ್ಮೆ, ಕೆಲ ಅಡಿಗಳಷ್ಟು, ಕೆಳಗೆ ಹೋದಾಗ ಸಿಗುವ ಸುಣ್ಣದ ಕಲ್ಲಿನಂತಹ ಪದರವನ್ನ ಈ ನೀರು ತಲುಪಿದಾಗ, ಆ ಪದರ ಕರಗಲು ಶುರುವಾಗುತ್ತೆ. ಆ ಮೂಲಕ ಆ ಪದರದಲ್ಲಿ ಆ ಖಾಲಿ ಜಾಗ ಸೃಷ್ಟಿ ಆಗುತ್ತೆ. ಇದರ ಪರಿಣಾಮ ಮೇಲಿರುವ ಭಾರವೆಲ್ಲ ಸಡನ್ನಾಗಿ ಕುಸಿದು ಕೆಳಹೋಗಿ ಸಿಂಕ್‌ ಹೋಲ್‌ ಸೃಷ್ಟಿ ಆಗುತ್ತೆ.

-masthmagaa.com

Contact Us for Advertisement

Leave a Reply