TATA ಶಿಸ್ತು ಶುರು! ಏರ್ ಇಂಡಿಯಾ ಉದ್ಯೋಗಿಗಳ ‘ವಕ್ರದೆಸೆ’ ಆರಂಭ

masthmagaa.com:

ಏರ್ ಇಂಡಿಯಾ ಟಾಟಾ ಗ್ರೂಪ್ ಗೆ ಹೋಗ್ತಿದ್ದಂತೆ ಮುಂದಿನ ಆರು ತಿಂಗಳೊಳಗೆ ಕ್ವಾಟ್ರಸ್ ಖಾಲಿ ಮಾಡುವಂತೆ ಉದ್ಯೋಗಿಗಳಿಗೆ ನೋಟಿಸ್ ಹೋಗಿದೆ. ಇದಕ್ಕೆ ರೊಚ್ಚಿಗೆದ್ದಿರೋ ಏರ್ ಇಂಡಿಯಾ ಉದ್ಯೋಗಿಗಳ ಯೂನಿಯನ್ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ರೀತಿ ಮುಷ್ಕರ ಹೋಗೋಕೂ ಮೊದಲು 2 ವಾರಗಳ ನೋಟಿಸ್ ನೀಡಬೇಖಿತ್ತು. ಹೀಗಾಗಿ ನವಂಬರ್ 2 ರಿಂದ ನಾವು ಸ್ಟ್ರೈಕ್ ಮಾಡ್ತೀವಿ ಅಂತ ಈಗಲೇ ಪ್ರದೇಶಿಕ ಲೇಬರ್ ಕಮೀಷನರ್ಗೆ ನೋಟಿಸ್ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನೌಕರರು ನಿವೃತ್ತಿ ಆಗೋ ತನಕ ಕ್ವಾಟ್ರಸ್ ತೆರವು ಮಾಡಿ ಹೋಗುವಂತೆ ಒತ್ತಾಯಿಸಬಾರದು ಅಂತ ಬೇಡಿಕೆ ಇಟ್ಟಿದ್ದಾರೆ. ಮುಂಬೈನ ಕಲೀನಾ ಹಾಗೂ ದಿಲ್ಲಿಯ ವಸಂತ್ ವಿಹಾರ್ ಸೇರಿ ದೇಶದ ಅನೇಕ ನಗರಗಳಲ್ಲಿ ಹೈಫೈ ಲೊಕೇಶನ್ ಗಳಲ್ಲಿ ಏರ್ ಇಂಡಿಯಾ ಆಸ್ತಿ, ಎಂಪ್ಲಾಯೀಸ್ ಕ್ವಾಟ್ರಸ್ ಇದೆ. ಸರ್ಕಾರದ ಕಂಪನಿಯಾಗಿದ್ದಾಗ ಪ್ರತೀ ವರ್ಷ ಲಾಸ್ ಮಾಡ್ತಿದ್ರೂ, ಅದಕ್ಷವಾಗಿ ಕೆಲಸ ಮಾಡ್ತಿದ್ರೂ ಯಾರೂ ಹೇಳೋರು ಕೇಳೋರು ಇರಲಿಲ್ಲ. ಆದ್ರೆ ಟಾಟಾ ಸಂಸ್ಥೆ ಆರಂಭದಿಂದಲೇ ಕಂಪನಿಯನ್ನ ಕಂಪನಿ ಥರ ನಡೆಸ್ತೀವಿ ಅಂತ ಹೊರಟಿದೆ. ವಿಶೇಷ ಸೌಲಭ್ಯ, ಖರ್ಚುಗಳಿಗೆಲ್ಲ ಬ್ರೇಕ್ ಹಾಕಲು ಮುಂದಾಗಿದೆ.

-masthmagaa.com

Contact Us for Advertisement

Leave a Reply