ಉಗ್ರರ ಜೊತೆಗೆ ಭಯೋತ್ಪಾದನೆ ಚಿಂತನೆಯನ್ನೇ ಮುಗಿಸಬೇಕು: ಅಜಿತ್ ಧೋವಲ್​​

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಭಯೋತ್ಪಾದನೆ ವಿರುದ್ಧ ಹೋರಾಟದ ಮಾತನಾಡಿದ್ದು, ಪಾಕ್​​ಗೆ ಪರೋಕ್ಷವಾಗಿ ಎಚ್ಚರಿಸಿದ್ದಾರೆ. ದೆಹಲಿಯಲ್ಲಿ ಎನ್​ಐಎಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೊದಲಿಗೆ ಪಾಕಿಸ್ತಾನ ಭಾರತದಲ್ಲಿ ಹೇಗೆ ಭಯೋತ್ಪಾದನೆ ಹರಡುತ್ತಿದೆ ಎಂದು ವಿವರಿಸಿದ್ರು. ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ವ್ಯವಸ್ಥೆಯ ಒಂದು ಭಾಗವನ್ನಾಗಿ ಮಾಡಿಕೊಂಡಿದೆ. ನಾವು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ಸಫಲರಾಗುತ್ತಿದ್ದೇವೆ. ನಮ್ಮ ಮುಂದಿನ ಗುರಿ ಭಯೋತ್ಪಾದನೆ ವಿಚಾರಧಾರೆಯನ್ನೇ ನಿರ್ಮೂಲನೆ ಮಾಡೋದು ಅಂತ ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ಕಳೆದ 3 ದಶಕಗಳಿಂದ ಹೋರಾಟ ನಡೆಯುತ್ತಿದೆ. ಪ್ರತಿಯೊಬ್ಬರು ಉಗ್ರರ ವಿರುದ್ಧ ಹೋರಾಡುವ ಬಗ್ಗೆ ಮಾತನಾಡುತ್ತಾರೆ. ಆದ್ರೆ ನಾವೆಲ್ಲರು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿಲ್ಲ. ಉಗ್ರರನ್ನು, ಹಂತಕರನ್ನು ಹೊಡೆದುರುಳಿಸುತ್ತಿದ್ದೇವೆ. ಇದನ್ನೇ ಭಯೋತ್ಪಾದನೆ ವಿರುದ್ಧದ ಹೋರಾಟ ಎಂದು ಭಾವಿಸುತ್ತಿದ್ದೇವೆ. ಆದ್ರೆ ಭಯೋತ್ಪಾದಕರು ಮತ್ತು ಭಯೋತ್ಪಾದನೆ ನಡುವಿನ ವ್ಯತ್ಯಾಸ ತಿಳಿಯಬೇಕು. ಉಗ್ರರ ಮೂಲ ಯಾವುದು..? ಅವರಿಗೆ ಹಣಕಾಸಿನ ನೆರವು ನೀಡುತ್ತಿರೋದು ಯಾರು..? ಶಸ್ತ್ರಾಸ್ತ್ರ ನೀಡುತ್ತಿರೋದು ಯಾರು..? ಎಂದು ತಿಳಿಯಬೇಕು. ನಂತರ ಹಣಕಾಸಿನ ನೆರವು ಮತ್ತು ಶಸ್ತ್ರಾಸ್ತ್ರ ಪೂರೈಕೆಯಾಗದಂತೆ ಮಾಡಬೇಕು. ಈ ಮೂಲಕ ಭಯೋತ್ಪಾದನೆ ಚಿಂತನೆಗೇ ಏಟು ನೀಡಬೇಕು ಎಂದು ಹೇಳಿದ್ದಾರೆ.

Contact Us for Advertisement

Leave a Reply