ಹಿಮದ ನಡುವೆಯೂ ಯೋಧರ ಡ್ಯೂಟಿ! ವಿಡಿಯೋ ವೈರಲ್

masthmagaa.com:

ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಹಿಮ ಸುರಿಯೋದು ಜೋರಾಗಿದೆ. ಗಾಳಿ ಕೂಡ ಜೋರಾಗಿ ಬೀಸುತ್ತಿದ್ದು, ಹವಾಮಾನ ಸರಿಯಿಲ್ಲದ ಕಾರಣ ಹಲವು ವಿಮಾನಗಳ ಹಾರಾಟವನ್ನೂ ರದ್ದು ಮಾಡಲಾಗಿದೆ. ಆದ್ರೂ ಕೊರೆಯುವ ಚಳಿಯಲ್ಲೂ ಯೋಧರು ಕಾರ್ಯ ನಿರ್ವಹಿಸ್ತಿದ್ದಾರೆ. 17 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಯೋಧ ನಿಂತಿರೋ ವಿಡಿಯೋವೊಂದು ವೈರಲ್ ಆಗಿದೆ. ಕುಪ್ವಾರ ಜಿಲ್ಲೆಯ ಲೈನ್​ ಆಫ್​ ಕಂಟ್ರೋಲ್​​​​​ ಬಳಿಯ ಪೋಸ್ಟ್​ ಇದಾಗಿದೆ. ಯೋಧನ ಮೊಣಕಾಲವರೆಗೂ ಹಿಮ ಆವರಿಸಿದ್ದು, ಆದ್ರೂ ಕೂಡ ದೃಢವಾಗಿ ನಿಂತು, ಡ್ಯೂಟಿ ಮಾಡ್ತಿರೋದು ನೋಡಬಹುದಾಗಿದೆ.

-masthmagaa.com

Contact Us for Advertisement

Leave a Reply