ಒಮೈಕ್ರಾನ್ ನಾಗಾಲೋಟ: ವಿವಿಧ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ

masthmagaa.com:

ದೇಶದಲ್ಲಿ ಒಮೈಕ್ರಾನ್​ ರೂಪಾಂತರಿ ಕೊರೋನಾ ಪ್ರಕರಣ ಫಾಸ್ಟಾಗಿ ಹರಡುತ್ತಿದ್ದು, ಅವುಗಳ ಸಂಖ್ಯೆ 358ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು 88 ಕೇಸ್​ ವರದಿಯಾಗಿದೆ. ಅದ್​​ಬಿಟ್ರೆ, ದೆಹಲಿ 67, ತೆಲಂಗಾಣ 38, ತಮಿಳುನಾಡು 34, ಕರ್ನಾಟಕ 31, ಗುಜರಾತ್ 30, ಕೇರಳ 27 ಹೀಗೆ… 358 ಒಮೈಕ್ರಾನ್​ ಸೋಂಕಿತರಲ್ಲಿ 114 ಜನ ಗುಣಮುಖರಾಗಿದ್ದಾರೆ ಅಂತಾನೂ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
– ಒಮೈಕ್ರಾನ್​ ಭೀತಿ ಹಿನ್ನೆಲೆ ಉತ್ತರಪ್ರದೇಶದಲ್ಲಿ ಡಿಸೆಂಬರ್​ 25ನೇ ತಾರೀಖಿನಿಂದ ನೈಟ್​ ಕರ್ಫ್ಯೂ ಜಾರಿಗೆ ಬಂದಿದೆ. ಅಲ್ಲದೆ ಮದ್ವೆಗಳಲ್ಲಿ 200 ಜನ ಸೇರೋಕೆ ಮಾತ್ರ ಅವಕಾಶ ನೀಡಲಾಗಿದೆ. ಗುಜರಾತ್​ ಕೆಲವೊಂದು ನಗರಗಳಲ್ಲಿ ಡಿಸೆಂಬರ್ 25ರಿಂದ ನೈಟ್​ ಕರ್ಫ್ಯೂ ಜಾರಿಗೆ ಬಂದಿದೆ.
– ದೆಹಲಿಯಲ್ಲಿ ಕೊರೋನಾ ನಿಯಮ ಉಲ್ಲಂಘಿಸಿ ರೆಸ್ಟೋರೆಂಟ್​​ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ರೆಸ್ಟೋರೆಂಟ್​ ಅನ್ನ ಸೀಲ್​ ಮಾಡಲಾಗಿದೆ. ಮತ್ತೊಂದುಕಡೆ ಮೊದಲ ಡೋಸ್​ ವ್ಯಾಕ್ಸಿನೇಷನ್​ನಲ್ಲಿ ದೆಹಲಿ ಹಂಡ್ರೆಡ್​ ಪರ್ಸೆಂಟ್​ ಸಾಧನೆ ಮಾಡಿದೆ. ಅಂದ್ರೆ ಅರ್ಹ ಫಲಾನುಭವಿಗಳಿಗೆಲ್ಲರಿಗೂ ಒಂದು ಡೋಸ್​ ಕೊರೋನಾ ಲಸಿಕೆ ಹಾಕಲಾಗಿದೆ.
– ಒಮೈಕ್ರಾನ್​ ಭೀತಿ ಹಿನ್ನೆಲೆ ಒಡಿಶಾದಲ್ಲಿ ಕ್ರಿಸ್​ಮಸ್​ ಮತ್ತು ನ್ಯೂ ಇಯರ್​ಗೆ ಹೊಸ ನಿರ್ಬಂಧಗಳನ್ನ ಜಾರಿಗೆ ತರಲಾಗಿದೆ.
– ಬಾಲಿವುಡ್​ ನಟಿ ಕರೀನಾ ಕಪೂರ್​​ಗೆ ತಗುಲಿರೋದು ಒಮೈಕ್ರಾನ್​ ರೂಪಾಂತರಿ ಅಲ್ಲ ಅನ್ನೋದು ಜಿನೋಮ್​ ಸೀಕ್ವೆನ್ಸಿಂಗ್​ನಲ್ಲಿ ಗೊತ್ತಾಗಿದೆ.
– ಅತ್ತ ಮುಂಬೈನಲ್ಲಿ ನಕಲಿ ಕೊರೋನಾ ವ್ಯಾಕ್ಸಿನೇಷನ್​ ಸರ್ಟಿಫಿಕೆಟ್​ ಮಾಡ್ತಿದ್ದ ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ. ನಕಲಿ ವ್ಯಾಕ್ಸಿನ್​ ಸರ್ಟಿಫಿಕೆಟ್​ ಅನ್ನ ಹೆಚ್ಚಿನ ದುಡ್ಡಿಗೆ ಆರೋಪಿಗಳು ಮಾರುತ್ತಿದ್ರು ಅಂತ ಪೊಲೀಸರು ಹೇಳಿದ್ದಾರೆ.
– ರಾಜಸ್ಥಾನದಲ್ಲಿ ಮನೆ ಮನೆಗೆ ಲಸಿಕೆ ಅಭಿಯಾನ ಹಿನ್ನೆಲೆ ಆರೋಗ್ಯ ಕಾರ್ಯಕರ್ತರು ಒಂಟೆ ಸವಾರಿ ಮಾಡಿ ಅರ್ಹರಿಗೆ ಕೊರೋನಾ ಲಸಿಕೆ ಚುಚ್ಚುವ ಫೋಟೋವನ್ನ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವೀಯ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply