ಪಂಜಾಬ್‌ ಹಾಗೂ ಜಮ್ಮು ಗಡಿಗಳಲ್ಲಿ ಡ್ರೋನ್‌ ವಿರೋಧಿ ಗನ್‌ಗಳ ನಿಯೋಜನೆ!

masthmagaa.com:

ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್‌ಗಳ ನುಸುಳುವಿಕೆ ಹೆಚ್ಚಾದ ಹಿನ್ನಲೆಯಲ್ಲಿ ಭಾರತೀಯ ಸೇನೆ ಡ್ರೋನ್‌ ವಿರೋಧಿ ಗನ್‌ಗಳನ್ನ ನಿಯೋಜಿಸಿದೆ. ಪಂಜಾಬ್‌ ಹಾಗೂ ಜಮ್ಮು ಗಡಿಗಳಲ್ಲಿ ಈಗಾಗಲೇ ಕೆಲವು ಅಂಟಿ ಡ್ರೋನ್‌ ಗನ್‌ಗಳನ್ನ ನಿಯೋಜಿಸಲಾಗಿದ್ದು, ಇನ್ನು ಕೆಲವು ಟ್ರಯಲ್‌ ಹಂತದಲ್ಲಿವೆ ಅಂತ ಗೃಹ ಸಚಿವಾಲಯದ ಅಧಿಕಾರಿಯೊಬ್ರು ಹೇಳಿದ್ದಾರೆ. ಅಂದ್ಹಾಗೆ ಕಳೆದ ವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಭಾರತದ ಗಡಿಯನ್ನ ನುಸುಳೋಕೆ ಸಾಧ್ಯವಾಗದ ತರ ಮಾಡಿ ಅಂತ ಭದ್ರತಾ ಪಡೆಗಳಿಗೆ ಸೂಚಿಸಿದ್ರು.

-masthmagaa.com

Contact Us for Advertisement

Leave a Reply