20 ವರ್ಷಗಳಲ್ಲಿ ಪಡೆದ ಹೈಸ್ಕೂಲ್ ಶಿಕ್ಷಣ ವ್ಯರ್ಥ: ತಾಲಿಬಾನ್ ಆದೇಶ

masthmagaa.com:

ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಯಾರೆಲ್ಲಾ ಹೈಸ್ಕೂಲ್ ಶಿಕ್ಷಣ ಪಡೆದಿದ್ದಾರೋ ಅದ್ಯಾವುದೂ ಪ್ರಯೋಜನಕ್ಕೆ ಬಾರಲ್ಲ ಅಂತ ತಾಲಿಬಾನಿಗಳು ಹೇಳಿದ್ದಾರೆ. ಕಾಬೂಲ್ ವಿವಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಾಕಿ ಹಕ್ಕಾನಿ, ಅಮೆರಿಕ ಬೆಂಬಲಿತ ಸರ್ಕಾರ ಅಂದ್ರೆ ಹಮೀದ್ ಖರ್ಝೈ ಮತ್ತು ಅಶ್ರಫ್ ಘನಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಯಾರೆಲ್ಲಾ ಹೈಸ್ಕೂಲ್​ನಿಂದ ಶಿಕ್ಷಣ ಪಡ್ಕೊಂಡಿದ್ದಾರೋ ಅದಕ್ಕೆ ಬೆಲೆ ಇಲ್ಲ. ಶಿಕ್ಷಣ ಸಂಸ್ಥೆಗಳು ಮುಂದಿನ ಪೀಳಿಗೆಯ ಮಕ್ಕಳಲ್ಲಿ ದೇಶಕ್ಕೆ ಹಿತವಾದ ಮೌಲ್ಯಗಳನ್ನ ತುಂಬಬೇಕು. ಅದನ್ನು ಅಫ್ಘಾನಿಸ್ತಾನ ಮುಂಬರುವ ದಿನಗಳಲ್ಲಿ ಬಳಸಿಕೊಳ್ಳುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಧಾರ್ಮಿಕ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿ ಮಾತಾಡಿದ್ದಾರೆ. ಯಾರೆಲ್ಲಾ ಆಧುನಿಕ ಶಿಕ್ಷಣದಲ್ಲಿ ಮಾಸ್ಟರ್ಸ್​​, ಪಿಹೆಚ್​ಡಿ ಪಡೆದಿದ್ದಾರೋ ಅವರೆಲ್ಲರೂ ಮದರಸಾ ಮತ್ತು ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಶಿಕ್ಷಣ ಪಡೆದಿರೋರಿಗೆ ಹೋಲಿಸಿದ್ರೆ ಕಡಿಮೆ ಜ್ಞಾನವನ್ನೇ ಹೊಂದಿರ್ತಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply