ಶಾಂತಿ ಭಂಗ ಮಾಡುವ ಯಾವುದೇ ಸಂಘಟನೆಯಾದ್ರೂ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ: ಪ್ರಿಯಾಂಕ್‌ ಖರ್ಗೆ

masthmagaa.com:

ಶಾಂತಿ ಭಂಗ ಮಾಡುವ XYZ ಯಾವುದೇ ಸಂಘಟನೆಯಾದ್ರೂ ಅದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ನಾನು ಮತ್ತೊಮ್ಮೆ ಪುನರುಚ್ಚಾರಣೆ ಮಾಡ್ತೇನೆ. ಶಾಂತಿ ಭಂಗ ಮಾಡುವ XYZ ಯಾವುದೇ ಸಂಘಟನೆ ಆದರೂ ಕ್ರಮ ಆಗಲಿದೆ. ತಾಕತ್ತು ಇದ್ದರೆ ಬ್ಯಾನ್ ಮಾಡಿ ಅಂತ ಬಿಜೆಪಿಯವರು ಹೇಳ್ತಾರೆ. ಬಿಜೆಪಿಯವ್ರಿಗೆ ತಾಕತ್ತಿದ್ರೆ ಕಾನೂನು ಉಲ್ಲಂಘಿಸಲಿ. ಬಾಬಾ ಅಂಬೇಡ್ಕರ್ ಅವರ ಸಂವಿಧಾನ ಏನು ಅಂತ ನಾವು ತೋರಿಸ್ತೀವಿ. ಬಿಜೆಪಿಯವ್ರು ಯಾಕೆ ಸಂವಿಧಾನ ಪಾಲನೆ ಮಾಡ್ತೀವಿ ಅಂತ ಹೇಳಲ್ಲ. ಬಿಜೆಪಿಯವರು ವಿವೇಕ ಇಲ್ಲದೆಯೇ ಮಾತನಾಡ್ತಾ ಇದ್ದಾರೆ. ನಾವು ಕೊಟ್ಟ 600 ಭರವಸೆಗಳಲ್ಲಿ 50 ಅಷ್ಟೇ ಫುಲ್ ಫಿಲ್ ಮಾಡಿದ್ದೀವಿ ಅಂತ ಅವರೇ ಹೇಳಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಾ?ಅಂತ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply