ಲಾಕ್​ಡೌನ್​ ಬೇಡ, ಅದು ಕೊನೇ ಆಯ್ಕೆ ಆಗಿರಲಿ: ಎಲ್ಲಾ ರಾಜ್ಯಗಳಿಗೆ ಮೋದಿ ಮನವಿ

masthmagaa.com:

ಕೊರೋನಾ ಎರಡನೇ ಅಲೆ ಹಿನ್ನೆಲೆ ದೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಈಗಿನ ಪರಿಸ್ಥಿತಿಯಲ್ಲಿ ನಾವು ಲಾಕ್​ಡೌನ್ ಜಾರಿಗೆ ತರೋದನ್ನ ತಡೆಯಬೇಕು. ರಾಜ್ಯಗಳು ಕೂಡ ಲಾಕ್​ಡೌನ್​ ಜಾರಿಗೆ ತರೋದನ್ನ ಕೊನೇ ಆಯ್ಕೆಯಾಗಿ ಇಟ್ಟುಕೊಳ್ಳಬೇಕು. ಅದರ ಬದಲು ಮೈಕ್ರೋ ಕಂಟೈನ್​ಮೆಂಟ್​ ಝೋನ್​ಗಳ ಮೂಲಕವೇ ಕೊರೋನಾ ನಿಯಂತ್ರಣಕ್ಕೆ ಪ್ರಯತ್ನಿಸೋಣ. ಅಗತ್ಯವಿದ್ರೆ ಮಾತ್ರ ಮನೆಯಿಂದ ಹೊರಬನ್ನಿ. ಮನೆಯಲ್ಲಿರೋ ಮಕ್ಕಳು ಕೂಡ ತಮ್ಮ ಪೋಷಕರು ಕಾರಣವಿಲ್ಲದೆ ಮನೆಯಿಂದ ಬರದಂತೆ ನೋಡಿಕೊಳ್ಳಿ. ಕೊರೋನಾ ನಿಯಮಗಳನ್ನ ಪಾಲಿಸಿ. ಈಗಿನ ಪರಿಸ್ಥಿತಿಯನ್ನ ಬದಲಿಸಲು ದೇಶದ ಜನರ ಧೈರ್ಯ, ಸಾಹಸ ಮುಖ್ಯವಾಗಿದೆ’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply