ಈ ವರ್ಷದಲ್ಲಿ ಫಿನಿಶ್​ ಆದ ಉಗ್ರರು, ನಕ್ಸಲರ ಲೆಕ್ಕ ಕೊಟ್ಟ CRPF

masthmagaa.com:

ಜಮ್ಮು ಕಾಶ್ಮೀರದಲ್ಲಿ ಈ ವರ್ಷ 112 ಉಗ್ರರನ್ನ ಹೊಡೆದುರುಳಿಸಲಾಗಿದೆ. 135 ಉಗ್ರರನ್ನ ವಶಕ್ಕೆ ಪಡೆಯಲಾಗಿದೆ. ಇಬ್ಬರು ಉಗ್ರರು ಶರಣಾಗಿದ್ದಾರೆ ಅಂತ ಸಿಆರ್​ಪಿಎಫ್​ ಹೇಳಿದೆ. ಇನ್ನು ನಕ್ಸಲರ ವಿಚಾರಕ್ಕೆ ಬಂದ್ರೆ, ಈ ವರ್ಷ 13 ಮಾವೋವಾದಿಗಳನ್ನ ಹೊಡೆದುರುಳಿಸಲಾಗಿದೆ, 603 ನಕ್ಸಲರನ್ನ ವಶಕ್ಕೆ ಪಡೆಯಲಾಗಿದೆ, 486 ನಕ್ಸಲರು ಶರಣಾಗಿದ್ದಾರೆ. ಇನ್ನು ಸಿಆರ್​ಪಿಎಫ್​ ಯೋಧರು ತಮ್ಮ ಸಹೋದ್ಯೋಗಿಗಳ ಮೇಲೆಯೇ ಗುಂಡು ಹಾರಿಸಿದ 13 ಪ್ರಕರಣಗಳು ಈ ವರ್ಷ ವರದಿಯಾಗಿದೆ, ಇದರಲ್ಲಿ 18 ಯೋಧರು ಪ್ರಾಣ ಕಳ್ಕೊಂಡಿದ್ದಾರೆ ಅಂತ ಸಿಆರ್​ಪಿಎಫ್​ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply