ʻಅರುಣಾಚಲ ಪ್ರದೇಶ ಚೀನಾದ ಅವಿಭಾಜ್ಯ ಅಂಗʼ: ಚೀನಾ ಸೇನೆ

masthmagaa.com:

ಅರುಣಾಚಲ ಪ್ರದೇಶದ ಬಗ್ಗೆ ಈಗ ಚೀನಾ ಸೇನೆ ಕೂಡ ಮೊಂಡಾಟ ಪ್ರದರ್ಶಿಸಿದ್ದು ಇದು ನಮ್ಮ ಜಾಗ ಅಂತ ಗುಟುರು ಹಾಕಿದೆ. ʻಅರುಣಾಚಲ ಪ್ರದೇಶ ಚೀನಾಗೆ ಸೇರಿದ್ದು…ಅದು ಚೀನಾ ಟೆರಿಟರಿಯ ಅವಿಭಾಜ್ಯ ಅಂಗ ಅಂತೇಳಿದೆ..ಚೀನಾದ ರಕ್ಷಣಾ ಸಚಿವಾಲಯ ಈ ಹೇಳಿಕೆ ನೀಡಿದೆ. ʻಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು ಅನ್ನೋದನ್ನ ಚೀನಾ ಯಾವತ್ತೂ ಒಪ್ಪಲ್ಲ….ಅದನ್ನ ತೀವ್ರವಾಗಿ ವಿರೋಧಿಸುತ್ತೆ. ಸೋ ಕಾಲ್ಡ್‌ ʻಅರುಣಾಚಲ ಪ್ರದೇಶʼವನ್ನ ಭಾರತ ಅಕ್ರಮವಾಗಿ ಸ್ಥಾಪಿಸಿದೆ. ಅದು ನಮ್ಮ ಜಾಗ’ ಅಂತ ಬಾಯಿ ಬಡಿದುಕೊಂಡಿದೆ. ಮಾರ್ಚ್‌ 09 ರಂದು ಪಿಎಂ ನರೇಂದ್ರ ಮೋದಿಯವ್ರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ರು. ಈ ವೇಳೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನ ಉದ್ಘಾಟಿಸಿದ್ರು. ಜೊತೆಗೆ ಸೆಲಾ ಟನೆಲ್‌ಗೆ ಗ್ರೀನ್‌ ಸಿಗ್ನಲ್‌ ನೀಡಿದ್ರು. ಈ ಟನೆಲ್‌ನ್ನ ಅಸ್ಸಾಂನ ತೇಜ್ಪುರ್‌ ಮತ್ತು ಅರುಣಾಚಲ ಪ್ರದೇಶಕ್ಕೆ ಸಂಪರ್ಕ ಕಲ್ಪಿಸೋಕೆ ನಿರ್ಮಿಸಲಾಗಿತ್ತು.‌ ಚೀನಾ ಬಾರ್ಡರ್‌ನಲ್ಲಿ ಬರುವ ತವಾಂಗ್‌ಗೆ ಬೇಗ ತಲುಪೋಕೆ ಇದರಿಂದ ಸಾಧ್ಯವಾಗ್ತಿತ್ತು. ಹೀಗಾಗಿ…ಚೀನಾ ಇದನ್ನ ಅರಗಿಸಿಕೊಳ್ಳೋಕೆ ಸಾಧ್ಯವಾಗದೇ ಭಾರತದ ಈ ನಡೆಯನ್ನ ಖಂಡಿಸಿತ್ತು. ʻಭಾರತದ ಪ್ರಧಾನಿ ಅರುಣಾಚಲ ಪ್ರದೇಶಕ್ಕೆ ಹೋಗಿರೋದನ್ನ ನಾವು ಸಹಿಸಲ್ಲ. ಭಾರತದ ನಡೆಯಿಂದ ಭಾರತ-ಚೀನಾ ಗಡಿ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತೆʼ ಅಂತ ಚೀನಾ ಸರ್ಕಾರ ಹೇಳಿತ್ತು..ಭಾರತ ಕೂಡ ಇದಕ್ಕೆ ತಿರುಗೇಟು ಕೊಟ್ಟಿತ್ತು. ಈಗ ಚೀನಾದ ಸೇನೆ ಕೂಡ ಅರುಣಾಚಲ ಪ್ರದೇಶದ ಬಗ್ಗೆ ಮಾತಾಡಿದೆ. ಇತ್ತೀಚಿಗಷ್ಟೇ ಜಾಗತಿಕ ಥಿಂಕ್‌ ಟ್ಯಾಂಕ್‌ ಮತ್ತು ಅಮೆರಿಕದ ಇಂಟಲಿಜೆನ್ಸ್‌ ರಿಪೋರ್ಟ್‌ಗಳು ಭಾರತ ಹಾಗೂ ಚೀನಾ ನಡುವೆ ಸಂಭಾವ್ಯ ಯುದ್ದ ಆಗಬೋದು ಅಂತೇಳಿದ್ವು. ಭಾರತ ಕೂಡ ಗಡಿಗೆ ಹೆಚ್ಚುವರಿಯಾಗಿ 10 ಸಾವಿರ ಸೈನಿಕರನ್ನ ಕಳುಹಿಸಿಕೊಟ್ಟಿತ್ತು. ಇದರ ನಡುವೆಯೇ ಈಗ ಚೀನಾ ಸೇನೆ ಅರುಣಾಚಲದ ಬಗ್ಗೆ ಮಾತಾಡಿದೆ.

-masthmagaa.com

Contact Us for Advertisement

Leave a Reply