ಕಾಂಗ್ರೆಸ್ ಪಕ್ಷವನ್ನ ಬ್ಯಾಂಡ್-ಬಾಜಾ ಪಾರ್ಟಿ ಎಂದ ಓವೈಸಿ

masthmagaa.com:

AIMIM ಪಕ್ಷವನ್ನ ಬಿಜೆಪಿಯ ಬಿ ಟೀಂ ಕರೀತಿರೋ ಕಾಂಗ್ರೆಸ್ ಮತ್ತು ಟಿಎಂಸಿ ವಿರುದ್ಧ ಅಸಾದುದ್ದಿನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅದ್ರಲ್ಲೂ ಕಾಂಗ್ರೆಸ್​ ಪಕ್ಷಕ್ಕೆ ‘ಬ್ಯಾಂಡ್​-ಬಾಜಾ ಪಾರ್ಟಿ’ (BBP) ಅಂತ ಹೊಸ ಹೆಸರನ್ನ ಕೂಡ ಇಟ್ಟಿದ್ದಾರೆ. ಓವೈಸಿ ಏನಂದ್ರು ಅಂದ್ರೆ, ‘ನಮ್ಮ ಪಕ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೆ ಅಂತ ಘೋಷಿಸಿದ ಕೂಡಲೇ ಒಂದು ಕಾಲದಲ್ಲಿ ಕಾಂಗ್ರೆಸ್ ಅಂತ ಗುರ್ತಿಸಿಕೊಂಡಿದ್ದ ಬ್ಯಾಂಡ್-ಬಾಜಾ ಪಾರ್ಟಿ ನಮ್ಮನ್ನ ಬಿಜೆಪಿಯ ಬಿ ಟೀಂ ಅಂತ ಕರೆಯೋಕೆ ಶುರು ಮಾಡ್ತು. ಮಮತಾ ಬ್ಯಾನರ್ಜಿ ಕೂಡ ಇದೇ ರೀತಿ ಹೇಳಿದ್ರು. ಅವರಿಗೆಲ್ಲಾ ನಾನ್ ಮಾತ್ರ ಕಾಣಿಸೋದಾ? ನಾನು ಜನರಿಗೆ ಮಾತ್ರ ಸೇರಿದ್ದು. ಅದನ್ನ ಬಿಟ್ರೆ ಬೇರೆ ಯಾವುದೇ ಪಕ್ಷಕ್ಕೆ ಸೇರಿಲ್ಲ’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply