masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಆರಂಭವಾಗಲಿರುವ 2ನೇ ಟೆಸ್ಟ್​ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲವೆನ್ ಅನೌನ್ಸ್ ಆಗಿದೆ. ವಿರಾಟ್ ಕೊಹ್ಲಿ ಪಿತೃತ್ವ ರಜೆ ತೆಗೆದುಕೊಂಡಿರೋದ್ರಿಂದ ಅಜಿಂಕ್ಯಾ ರಹಾನೆ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ತಂಡದಲ್ಲಿ ಒಟ್ಟು 4 ಬದಲಾವಣೆ ಮಾಡಲಾಗಿದೆ. ಪೃಥ್ವಿ ಶಾ ಬದಲು ಶುಬ್​ಮನ್​ ಗಿಲ್, ಮೊಹಮ್ಮದ್ ಶಮಿ ಬದಲು ಮೊಹಮ್ಮದ್ ಸಿರಾಜ್​, ವೃದ್ಧಿಮಾನ್ ಸಹ ಬದಲು ರಿಷಬ್ ಪಂತ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅಂತಿಮ 11 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶುಬ್​ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್​ಗೆ ಇದು ಮೊದಲ​  ಅಂತರಾಷ್ಟ್ರೀಯ ಟೆಸ್ಟ್ ಪಂದ್ಯ ಆಗಿರಲಿದೆ. ಕರ್ನಾಟಕದ ಕೆ.ಎಲ್​. ರಾಹುಲ್​ಗೆ ಎರಡನೇ ಟೆಸ್ಟ್​ನಲ್ಲೂ ಸ್ಥಾನ ಸಿಕ್ಕಿಲ್ಲ. ಅಲ್ಲದೆ 5 ಜನ ಬೌಲರ್​ಗಳು ಯಾಕೆ? ರಾಹುಲ್​ರನ್ನ ಯಾಕೆ ಆಯ್ಕೆ ಮಾಡಿಲ್ಲ? ವೃದ್ಧಿಮಾನ್ ಸಹರನ್ನ ಕೈಬಿಟ್ಟಿದ್ದೇಕೆ? ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋದ್ಯಾರು? ಅನ್ನೋ ಪ್ರಶ್ನೆಗಳು ಟ್ವಿಟ್ಟರ್​ನಲ್ಲಿ ಹರಿದಾಡ್ತಿದೆ.

1. ಅಜಿಂಕ್ಯಾ ರಹಾನೆ (ನಾಯಕ)

2. ಮಯಾಂಕ್ ಅಗರ್​ವಾಲ್​

3. ಶುಬ್​ಮನ್​ ಗಿಲ್

4. ಚೇತೇಶ್ವರ ಪೂಜಾರ (ಉಪನಾಯಕ)

5. ಹನುಮ ವಿಹಾರಿ

6. ರಿಷಬ್ ಪಂತ್

7. ರವೀಂದ್ರ ಜಡೇಜಾ

8. ರವಿಚಂದ್ರನ್ ಅಶ್ವಿನ್

9. ಉಮೇಶ್ ಯಾದವ್

10. ಜಸ್ಪ್ರಿತ್ ಬೂಮ್ರಾ

11. ಮೊಹಮ್ಮದ್ ಸಿರಾಜ್

-masthmagaa.com

Contact Us for Advertisement

Leave a Reply