ಬಾಬಾ ಕಾ ಡಾಬಾ ಅಜ್ಜ ಆತ್ಮಹತ್ಯೆಗೆ ಯತ್ನ

masthmagaa.com:

ಬಾಬಾ ಕಾ ಡಾಬಾ ಅನ್ನೋ ಸಣ್ಣ ರೋಡ್​ಸೈಡ್ ಕ್ಯಾಂಟೀನ್ ಬಗ್ಗೆ ನೀವು ಕೇಳಿರಬಹುದು. ಅದ್ರ ಮಾಲೀಕ ಕಾಂತ ಪ್ರಸಾದ್ ಈಗ ಆತ್ಮಹತ್ಯೆಗೆ ಯತ್ನಿಸಿ, ದೆಹಲಿಯ ಸಫ್ದರ್​​ಜಂಗ್ ಆಸ್ಪತ್ರೆಗೆ ಸೇರಿದ್ದಾರೆ. ರಾತ್ರಿ ಡ್ರಿಂಕ್ಸ್​ ಜೊತೆಗೆ ನಿದ್ದೆ ಮಾತ್ರೆ ಸೇವಿಸಿದ್ದು, ಈ ಘಟನೆಗೆ ಕಾರಣ ಅಂತ ಅವರ ಮಗ ಹೇಳಿದ್ದಾರೆ. ಕಳೆದ ವರ್ಷ ಇವರ ಬಾಬಾ ಕಾ ಡಾಬಾ ಕ್ಯಾಂಟೀನ್​ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಇದನ್ನು ಕಂಡ ಜನ ಲಕ್ಷಾಂತರ ರೂಪಾಯಿ ಸಹಾಯ ಕೂಡ ಮಾಡಿದ್ರು. ಆದ್ರೆ ನಂತರದಲ್ಲಿ ದೊಡ್ಡ ರೆಸ್ಟೋರಂಟ್ ತೆರೆದಿದ್ದ ಬಾಬಾ ಕಾಂತ ಪ್ರಸಾದ್​​ಗೆ ಭಾರಿ ನಷ್ಟವಾಗಿ, ಬಾಗಿಲು ಮುಚ್ಚಿದ್ರು. ಮತ್ತೆ ತಮ್ಮ ಹಳೆಯ ರೋಡ್​ಸೈಡ್ ಕ್ಯಾಂಟೀನ್​​ ಬಾಬಾ ಕಾ ಡಾಬಾಗೆ ಬಂದಿದ್ರು.

-masthmagaa.com

Contact Us for Advertisement

Leave a Reply