BIG NEWS: ರಿಯಾ ಚಕ್ರಬರ್ತಿಯ ಜಾಮೀನು ಅರ್ಜಿ ವಜಾ..!

masthmagaa.com:

ಡ್ರಗ್ಸ್ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಘಟಕದಿಂದ (NCB) ಅರೆಸ್ಟ್ ಆಗಿದ್ದ ಬಾಲಿವುಡ ನಟಿ ರಿಯಾ ಚಕ್ರಬರ್ತಿಯ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ಕೋರ್ಟ್​ ತಿರಸ್ಕರಿಸಿದೆ. ಇದರ ಜೊತೆಗೆ ರಿಯಾಳ ಸಹೋದರ ಶೌವಿಕ್ ಚಕ್ರಬರ್ತಿ, ದೀಪೇಶ್ ಸಾವಂತ್, ಸ್ಯಾಮ್ಯುಯೆಲ್ ಮಿರಾಂಡಾ, ಅಬ್ದುಲ್ ಬಸಿತ್ ಮತ್ತು ಝೈಡ್ ವಿಲಾಟ್ರಾ ಅವರ ಬೇಲ್ ಅರ್ಜಿಯನ್ನು ಕೂಡ ಕೋರ್ಟ್​ ರಿಜೆಕ್ಟ್ ಮಾಡಿದೆ.

ಈ ಮೂಲಕ ಜಾಮೀನು ಪಡೆದು ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ರಿಯಾ ಚಕ್ರಬರ್ತಿಗೆ ಭಾರಿ ಹಿನ್ನಡೆಯಾಗಿದೆ. ಸದ್ಯ ಮುಂಬೈನ ಬೈಕುಲ್ಲಾ ಜೈಲಿನಲ್ಲಿರುವ ರಿಯಾ ಚಕ್ರಬರ್ತಿಯ ಎನ್​ಸಿಬಿ ಕಸ್ಟಡಿ ಮುಂದುವರಿಯಲಿದೆ.

-masthmagaa.com

Contact Us for Advertisement

Leave a Reply