ಸೆ,26, 27ಕ್ಕೆ ಬ್ಯಾಂಕ್ ಬಂದ್ ಇರಲ್ಲ..ಡೋಂಟ್ ವರಿ..

ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಇದೇ 26, 27ರಂದು ಮುಷ್ಕರಕ್ಕೆ ಕರೆ ನೀಡಿದ್ದ ಬ್ಯಾಂಕ್ ಅಧಿಕಾರಿಗಳ ಒಕ್ಕೂಟಗಳು ನಿರ್ಧಾರ ಬದಲಿಸಿವೆ. ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಭರವಸೆ ನೀಡಿರೋದ್ರಿಂದ ಮುಷ್ಕರ ಕೈಬಿಟ್ಟಿರೋದಾಗಿ ಒಕ್ಕೂಟಗಳು ತಿಳಿಸಿವೆ. ಬ್ಯಾಂಕ್‍ಗಳ ವಿಲೀನದಿಂದ ಹಲವು ಸಮಸ್ಯೆಗಳು ಎದುರಾಗಲಿದ್ದು, ಅವುಗಳನ್ನು ಬಗೆಹರಿಸಲು ಸಮಿತಿ ರಚನೆ ಮಾಡುವ ಕುರಿತು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ವೇತನ ಪರಿಷ್ಕರಣೆ, ವಾರದಲ್ಲಿ 5 ದಿನ ಕೆಲಸ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Contact Us for Advertisement

Leave a Reply