ಬಂಗಾಳ ಕದನಕ್ಕೆ ದೀದಿಯ ಸ್ಲೋಗನ್ ಏನು ಗೊತ್ತಾ?

masthmagaa.com:

ಪಶ್ಚಿಮ ಬಂಗಾಳ: ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಜೋರಾಗ್ತಿದೆ. ಈ ನಡುವೆ ಟಿಎಂಸಿ ಚುನಾವಣಾ ಸ್ಲೋಗನ್ ರಿಲೀಸ್ ಮಾಡಿದೆ. ಬಾಂಗ್ಲಾ ನಿಜೆರ್ ಮೆಯೆಕೇ ಚಾಯೆ ಅಂದ್ರೆ ಬಾಂಗ್ಲಾಗೆ ಅದರದ್ದೇ ಮಗಳು ಬೇಕು ಅನ್ನೋದು ಆ ಸ್ಲೋಗನ್.. ಈ ಮೂಲಕ ಬಂಗಾಳಿಗಳು ಮತ್ತು ಹೊರಗಿನವರು ಅನ್ನೋ ದಾಳ ಉರುಳಿಸಲು ದೀದಿ ಪಡೆ ಸಜ್ಜಾಗಿದೆ. ಹೀಗಾಗಿಯೇ ಮಮತಾ ಬ್ಯಾನರ್ಜಿಯವರನ್ನು ಬಂಗಾಳದ ಮಗಳು ಅಂತ ಬಿಂಬಿಸಲಾಗ್ತಾ ಇದೆ. ಕೋಲ್ಕತ್ತದಾದ್ಯಂತ ಮಮತಾ ಬ್ಯಾನರ್ಜಿಯ ದೊಡ್ಡ ಫೋಟೋ ಇರುವ ಬ್ಯಾನರ್​ಗಳನ್ನು ಹಾಕಲಾಗಿದೆ.

ಈ ಹಿಂದೆ ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿದ್ದ ನಿತೀಶ್ ಕುಮಾರ್ ಕೂಡ ಬಿಹಾರ್ ವರ್ಸಸ್ ಬಾಹರಿ ಅಂತ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇಲ್ಲಿ ನಿತೀಶ್ , ಮಮತಾ ಅನ್ನೋಕಿಂತ ಇದು ಚುನಾವಣೆ ಪ್ರಚಾರದ ಪ್ಲಾನಿಂಗ್ ಬ್ಯುಸಿನೆಸ್ ನಡೆಸೋ ಪ್ರಶಾಂತ್ ಕಿಶೋರ್ ಅವರ ಹಳೇ ತಂತ್ರ. ಅವ್ರು ಹೋದಲೆಲ್ಲ ಬಳಸೋದು ಇದೆ ಟೆಕ್ನಿಕ್. ಈಗ ಮಮತಾ ಪರವಾಗಿ ಕೆಲಸ ಮಾಡ್ತಿದಾರೆ.

-masthmagaa.com

Contact Us for Advertisement

Leave a Reply