ಭೋಜ್‌ ಪುರಿ ನಟಿ ಆಕಾಂಕ್ಷಾ ಆತ್ಮಹತ್ಯೆ: ಬಾಯ್‌ಫ್ರೆಂಡ್‌ ಪೊಲೀಸ್‌ ವಶಕ್ಕೆ!

masthmagaa.com:

ಜನಪ್ರಿಯ ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಮಾರ್ಚ್ 26 ರಂದು ವಾರಣಾಸಿಯ ಹೋಟೆಲ್ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿದ್ದರು. ಇದೀಗ ಆಕಾಂಕ್ಷಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇವರ ಬಾಯ್‌ಫ್ರೆಂಡ್‌ ಸಮರ್‌ ಸಿಂಗ್‌ ಅವರನ್ನ ಪೋಲಿಸರು ಬಂಧಿಸಿದ್ದಾರೆ.

ಜನಪ್ರಿಯ ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಸಾವಿನ ಪ್ರಕರಣದ ಆರೋಪಿ ಗಾಯಕ ಸಮರ್ ಸಿಂಗ್‌ನನ್ನು ಉತ್ತರ ಪ್ರದೇಶ ಪೊಲೀಸರು ಗಾಜಿಯಾಬಾದ್‌ನಿಂದ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಹದಿನೈದು ದಿನಗಳ ಹಿಂದೆ ಸಾರಾನಾಥ್‌ನ ಹೋಟೆಲ್ ಕೋಣೆಯಲ್ಲಿ ದುಬೆ ಶವವಾಗಿ ಪತ್ತೆಯಾದ ನಂತರ ಸಮರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ದೆಹಲಿಯ ಗಾಜಿಯಾಬಾದ್‌ನ ನಂದಗ್ರಾಮ್ ಪ್ರದೇಶದ ವಸತಿ ಸೊಸೈಟಿಯಲ್ಲಿ ಸಮರ್ ಸಿಂಗ್ ಅಡಗಿಕೊಂಡಿದ್ದ.
“ಸಾರನಾಥ್ ಪೊಲೀಸ್ ಠಾಣೆಯ ತಂಡವು ಗುರುವಾರ ತಡರಾತ್ರಿ ಘಾಜಿಯಾಬಾದ್‌ಗೆ ಬಂದಿದ್ರು. ಘಾಜಿಯಾಬಾದ್ ಪೊಲೀಸರ ಸಹಾಯದೊಂದಿಗೆ ಚಾರ್ಮ್ಸ್ ಕ್ಯಾಸಲ್ ಸೊಸೈಟಿಯಿಂದ ಸಮರ್ ಸಿಂಗ್ ಅವರನ್ನು ಬಂಧಿಸಿದ್ದೇವೆ” ಎಂದು ಪೊಲೀಸ್ ಉಪ ಆಯುಕ್ತ ನಿಪುನ್ ಅಗರ್ವಾಲ್ ಹೇಳಿದ್ದಾರೆ.

ಇನ್ನು ಜನಪ್ರಿಯ ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಮಾರ್ಚ್ 26 ರಂದು ವಾರಣಾಸಿಯ ಹೋಟೆಲ್ ಕೋಣೆಯೊಳಗೆ ಶವವಾಗಿ ಪತ್ತೆಯಾಗಿದ್ದರು. 25 ವರ್ಷದ ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಭದೋಹಿ ಜಿಲ್ಲೆಯ ನಿವಾಸಿಯಾಗಿದ್ದ ದುಬೆ, ಸಿನಿಮಾ ಚಿತ್ರೀಕರಣಕ್ಕೆಂದು ವಾರಣಾಸಿಗೆ ತೆರಳಿದ್ದು, ಹೋಟೆಲ್‌ನಲ್ಲಿ ತಂಗಿದ್ದರು.

ಇನ್ನು ಆಕಾಂಕ್ಷ ದುಬೆ ಪರ ಲಾಯರ್‌ ಶಶಾಂಕ್‌ ಶೇಖರ್‌ ತ್ರಿಪಾಠಿ ಬುಧವಾರ ಸಿಬಿಐಗೆ ಈ ಪ್ರಕರಣದ ತನಿಖೆಯನ್ನ ಮಾಡುವಂತೆ ಒತ್ತಾಯಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಅವರು, 25 ವರ್ಷದ ನಟಿನ ಸಾವು ಆತ್ಮಹತ್ಯೆಯಿಂದಲ್ಲ, ಬದಲಿಗೆ ಹೋಟೆಲ್ ಕೋಣೆಯಲ್ಲಿ ಕೆಲವರು ಅವಳನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.ಅಲ್ಲದೇ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಅಂತ್ಯಸಂಸ್ಕಾರ ನಡೆಸಬೇಕು ಎಂದು ದುಬೆಯ ತಾಯಿ ಒತ್ತಾಯ ಮಾಡಿದರೂ ಕೂಡ ಆಕಾಂಕ್ಷಾ ಶವವನ್ನು ಬಲವಂತವಾಗಿ ಸುಟ್ಟು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೇ ಭೋಜ್‌ಪುರಿ ಇಂಡಸ್ಟ್ರಿಯಲ್ಲಿ ಅನೇಕ ಜನರು ದುಬೆಯನ್ನು ಶೋಷಿಸುತ್ತಿದ್ದರು ಮತ್ತು ಅವರ ಕೆಲಸಕ್ಕೆ ಸಂಬಳ ನೀಡುತ್ತಿರಲಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply