7 ಜನರನ್ನು ಬಲಿಪಡೆದ ಯಮರೂಪಿ ದೋಣಿ..!

ಒಂದ್ಕಡೆ ಪ್ರವಾಹದಿಂದ ಬಿಹಾರದ ಜನ ಕಂಗೆಟ್ಟು ಹೋಗಿದ್ದಾರೆ. ಆದ್ರೆ ಅದರ ನಡುವೆಯೇ ಮತ್ತೊಂದು ದೊಡ್ಡ ದುರಂತ ಸಂಭವಿಸಿದೆ. ದೋಣಿ ಮುಳುಗಿ 7 ಜನ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಬಿಹಾರದ ಕತಿಹಾರ್ ಪ್ರದೇಶದಲ್ಲಿರುವ ಮಹಾನಂದ್ ನದಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಸ್ಥಳಕ್ಕೆ ಎನ್‍ಡಿಆರ್‍ಎಫ್ ಪಡೆ ಧಾವಿಸಿದ್ದು, ಶೋಧ ಕಾರ್ಯ ಮುಂದುವರಿದಿದೆ. ಪಶ್ಚಿಮ ಬಂಗಾಳದ ಮಲಾಡ್ ಬಿಹಾರದ ಕತಿಹಾರ್ ಪ್ರದೇಶಕ್ಕೆ ಈ ದೋಣಿ ಹೊರಟಿತ್ತು. ಆದ್ರೆ ಎರಡೂ ರಾಜ್ಯಗಳ ಗಡಿಭಾಗ ಜಗನ್ನಾಥಪುರದ ಬಳಿ ಈ ದುರ್ಘಟನೆ ಸಂಭವಿಸಿದೆ. ಕಳೆದ ತಿಂಗಳಷ್ಟೇ ಆಂಧ್ರದ ಗೋಧಾವರಿಯಲ್ಲೂ ಇಂಥದ್ದೇ ದುರಂತ ಸಂಭಿವಿಸಿ, ಹಲವರು ಸಾವನ್ನಪ್ಪಿದ್ದರು.

Contact Us for Advertisement

Leave a Reply