ಪ್ರವಾಹದ ನಡುವೆ ಯುವತಿಯ ಫೋಟೋ ಶೂಟ್..! ಫುಲ್ ವೈರಲ್

ಬಿಹಾರದಲ್ಲಿ ಪ್ರವಾಹ ಬಂದು ಜನ ಕಂಗಾಲಾಗಿದ್ದಾರೆ. ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಕೆಲವು ಪ್ರದೇಶಗಳಲ್ಲಂತೂ ಎದೆವರೆಗೆ ಮಳೆ ನೀರು ಆವರಿಸಿದೆ. ಅಲ್ಲದೆ ರಕ್ಷಣೆಗಾಗಿ NDRF ಪಡೆ ನಿಯೋಜಿಸಲಾಗಿದೆ. ಪರಿಸ್ಥಿತಿ ಹಿಗಿದ್ರೂ ಕೂಡ ಈ ನೀರು ನಿಂತಿರುವ ರಸ್ತೆಯಲ್ಲಿ ಮಾಡಲ್ ಒಬ್ಬಳು ಫೋಟೋ ಶೂಟ್ ಮಾಡಿಸಿದ್ದಾಳೆ. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಆದಿತಿ ಸಿಂಗ್ ಫೋಟೋಗೆ ಪೋಸ್ ಕೊಡ್ತಿದ್ರೆ, ಆಕೆಯ ಸ್ನೇಹಿತ ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿವೆ. ಅಲ್ಲದೆ ಹಲವರು ಈ ವಿದ್ಯಾರ್ಥಿಗಳ ಕಾನ್ಸೆಪ್ಟ್‍ನ್ನು ಹೊಗಳಿದ್ರೆ, ಇನ್ನು ಕೆಲವರು ಪ್ರವಾಹದ ನಡುವೆ ಈ ರೀತಿ ಮಾಡೋದು ಸರಿಯಲ್ಲ ಅಂತ ಟೀಕಿಸಿದ್ದಾರೆ. ಈ ಫೋಟೋ ಶೇರ್ ಮಾಡಿರೋ ಸೌರಭ್ ಅನುರಾಜ್, ನಾವು ಸಿಟಿಯ ಪರಿಸ್ಥಿತಿ ಹೇಗಿದೆ ಅನ್ನೋದನ್ನ ತೋರಿಸುವ ಸಲುವಾಗಿ ಹೀಗೆ ಮಾಡಿದ್ದೇವೆ ಅಷ್ಟೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

https://www.instagram.com/p/B28OKTtDOb9/?utm_source=ig_web_copy_link

Contact Us for Advertisement

Leave a Reply