ರಾಖಿ ಸಾವಂತ್ ಮೇಲೆ ಬಿಷ್ನೋಯ್ ಗ್ಯಾಂಗ್ ಕಣ್ಣು!

masthmagaa.com:

ಸಲ್ಮಾನ್ ಖಾನ್ ಮತ್ತು ರಾಖಿ ಸಾವಂತ್ ‘ದಬಾಂಗ್’ ಚಿತ್ರದಿಂದ ಒಳ್ಳೆಯ ಸ್ನೇಹಿತರು. ಕೆಲ ತಿಂಗಳ ಹಿಂದೆ ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದರು. ಈ ಬೆದರಿಕೆ ಇ-ಮೇಲ್‌ಗೆ ರಾಖಿ ಸಾವಂತ್‌ ಕೂಡ ಸಲ್ಮಾನ್‌ ಪರ ಮಾತನಾಡಿದ್ದರು. ಈಗ ಅದೇ ಗ್ಯಾಂಗ್‌ನಿಂದ ರಾಖಿ ಸಾವಂತ್‌ಗೂ ಕೂಡ ಕೊಲೆ ಬೆದರಿಕೆ ಇ-ಮೇಲ್‌ಗಳು ಬಂದಿದೆ.

ಇ-ಮೇಲ್‌ನಲ್ಲಿ “ರಾಖಿ ನಿಮಗೆ ಸೆಲೆಕ್ಟ್‌ ಮಾಡೋಕೆ ಯಾವುದೇ ಆಯ್ಕೆ ಇಲ್ಲ. ಸಲ್ಮಾನ್‌ ಖಾನ್‌ಗೆ ಸಪೋರ್ಟ್‌ ಮಾಡಿದ್ರೆ ನಿಮ್ಮನ್ನೂ ಕೂಡ ಕೊಲೆ ಮಾಡ್ತೀವಿ. ನಿಮ್ಮ ಸಹೋದರ ಅಂತ ಹೇಳುವ ಸಲ್ಮಾನ್ ಅನ್ನ ಸೇಫ್‌ ಮಾಡೋಕೆ ಎಷ್ಟು ಸೆಕ್ಯುರಿಟಿಯನ್ನು ಇಟ್ಟರೂ ಮುಂಬೈನಲ್ಲಿ ಅವರನ್ನ ಕೊಲೆ ಮಾಡಿಯೇ ಮಾಡುತ್ತೇವೆ. ಎಷ್ಟೇ ಸೆಕ್ಯೂರಿಟಿ ಇದ್ರೂ ಕೂಡ ಅವರ ಕೊಲೆ ಆಗತ್ತೆ. ಇದು ನಿಮ್ಮ ಕೊನೆಯ ಎಚ್ಚರಿಕೆ ರಾಖಿ” ಎಂದು ಬರೆಯಲಾಗಿದೆ.

ಇನ್ನು ಈ ಇ-ಮೇಲ್‌ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಖಿ ಸಾವಂತ್‌ “ನೀವು ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದರೆ, ನಾವು ನಿನ್ನನ್ನು ಕೊಲ್ಲುತ್ತೇವೆ ಎಂದು ಅವರು ಹೇಳ್ತಾ ಇದಾರೆ. ಆದರೆ ನನ್ನ ತಾಯಿಗೆ ಆರೋಗ್ಯ ಸರಿ ಇಲ್ದೆ ಇದ್ದಾಗ ಸಲ್ಮಾನ್ ಖಾನ್ ನನಗೆ ಸಹಾಯ ಮಾಡಿದ್ದಾರೆ. ಹಾಗಾಗಿ ನಾನು ಯಾವಾಗಲೂ ಅವರ ಪರ ಮಾತಾಡ್ತೀನಿ. ನನ್ನ ತಾಯಿಯನ್ನ ಕ್ಯಾನ್ಸರ್‌ನಿಂದ ಉಳಿಸೋಕೆ 50 ಲಕ್ಷ ರೂ ಕೊಟ್ಟು ನನಗೆ ಸಹಾಯ ಮಾಡಿದ್ರು. ನಾನ್ಯಾಕೆ ಮಾತನಾಡಬಾರದು ? ಅವರು ಸತ್ತ ಮೇಲೆ ಕ್ಯಾಂಡಲ್‌ ಹಿಡಿದು ಮೌನಾಚರಣೆ ಮಾಡುವ ಬದಲು ಅವರು ಬದುಕಿದ್ದಾಗಲೇ ಅವರ ಪರ ಮಾತಾಡೋದ್ರಲ್ಲಿ ತಪ್ಪೇನಿದೆ.” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಬೀಷ್ಣೊಯ್‌ ಗ್ಯಾಂಗ್‌ ಅವರು ರಾಖಿ ಸಾವಂತ್‌ಗೆ ಇನ್ನೊಂದು ಮೇಲ್‌ ಮಾಡಿದ್ದಾರೆ. ಇದರಲ್ಲಿ ” ರಾಖಿ ನಾವು ನಿನಗೆ ಕೊನೆಯ ಬಾರಿ ಹೇಳ್ತಾ ಇದೀವಿ. ಪದೇ ಪದೇ ಇದೆ ವಿಷಯವನ್ನ ಹೇಳ್ತಾ ಇರೋದಿಲ್ಲ. ಸಲ್ಮಾನ್ ಖಾನ್ ಅವರನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಯಾರಿಗೂ ಹೆದರೋದಿಲ್ಲ. ನಾವು ಸಲ್ಮಾನ್‌ನ ಅಹಂಕಾರವನ್ನು ನಾಶ ಮಾಡ್ತೀವಿ. ದುಡ್ಡಿದೆ, ಅಧಿಕಾರ ಇದೆ ಸಿಕ್ಕಾಪಟ್ಟೆ ಅಹಂಕಾರದಲ್ಲಿ ಇದಾನೆ, ಅವರ ಅಹಂಕಾರ ಹೆಚ್ಚು ದಿನ ಇರೋದಿಲ್ಲ. ಅವನು ಗೋಲ್ಡಿ ಭಾಯ್ ಜೊತೆ ಮಾತನಾಡಿ, ಕ್ಷಮೆ ಕೇಳಬೇಕು ಇಲ್ಲ ಅಂದ್ರೆ ಅವನು ಸಾಯೋಕೆ ರೆಡಿ ಆಗಬೇಕು. ಅವನನ್ನು ಅವನ ಮನೆಯ ಮುಂದೆಯೇ ಕೊಲ್ಲುತ್ತೇವೆ” ಅಂತ ಮೇಲ್‌ ಮಾಡಿದ್ದಾರೆ.

ತನಗೆ ಬಂದಿರುವ ಇ-ಮೇಲ್‌ಗೆ ಕಂಪ್ಲೇಂಟ್‌ ಮಾಡೋದಿಲ್ಲ ಎಂದು ರಾಖಿ ಸಾವಂತ್‌ ಹೇಳಿದ್ದಾರೆ. “ನಾನು ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳೊದಿಲ್ಲ, ಭಯ, ಮತ್ತೆ ಕಂಫ್ಯೂಸ್‌ ಆಗ್ತಾ ಇದೆ, ಮುಂದ್‌ ಎನ್‌ ಮಾಡ್ಬೇಕು ಅಂತಾನು ಗೊತ್ತಾಗ್ತಾ ಇಲ್ಲಾ, ಎಲ್ಲವನ್ನ ದೇವರಿಗೆ ಬಿಡ್ತೀನಿ” ಅಂತ ಹೇಳಿದ್ದಾರೆ.

ಇನ್ನು ರಾಖಿ ಸಾವಂತ್‌ಗೆ “ಪ್ರಿನ್ಸ್ ಮಾವಿ” ಎಂಬ ವ್ಯಕ್ತಿಯಿಂದ ಎರಡು ಇಮೇಲ್‌ಗಳು ಬಂದಿದೆ. ಮೊದಲ ಇ-ಮೇಲ್‌ನ್ನ ಏಪ್ರಿಲ್ 18 ರಂದು ಬೆಳಿಗ್ಗೆ 7.22 ಕ್ಕೆ ಕಳುಹಿಸಲಾಗಿದೆ ಮತ್ತು ಎರಡನೇ ಇ-ಮೇಲ್ ಅದೇ ದಿನ ಮಧ್ಯಾಹ್ನ 1.19 ಕ್ಕೆ ಕಳಿಸಿದ್ದಾರೆ.

-masthmagaa.com

Contact Us for Advertisement

Leave a Reply