ಕೇರಳಕ್ಕೆ ‘ಮೆಟ್ರೋ ಮ್ಯಾನ್​’ ಸಿಎಂ ಅಭ್ಯರ್ಥಿ! ಬಿಜೆಪಿ ಸ್ಟ್ರಾಟಜಿ ಏನು ಗೊತ್ತಾ?

masthmagaa.com:

ಮುಂಬರುವ ಕೇರಳ ವಿಧಾನಸಭೆ ಚುನಾವಣೆಗೆ ‘ಮೆಟ್ರೋ ಮ್ಯಾನ್​’ ಖ್ಯಾತಿಯ ಇ. ಶ್ರೀಧರನ್​ ಸಿಎಂ ಅಭ್ಯರ್ಥಿ ಅಂತ ಬಿಜೆಪಿ ಘೋಷಣೆ ಮಾಡಿದೆ. ಈ ಬಗ್ಗೆ ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಮಾಹಿತಿ ನೀಡಿದ್ದಾರೆ. ಡೆಲ್ಲಿ ಮೆಟ್ರೋದ ಆರ್ಕಿಟೆಕ್ಟ್ ಆಗಿರೋ ಶ್ರೀಧರನ್ ಫೆಬ್ರವರಿ 25ರಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಆಗ, ಎಲೆಕ್ಷನ್​ಗೆ ನಿಲ್ಲಲು ನಾನ್ ರೆಡಿ ಇದ್ದೀನಿ, ಗೆಲುವು ಖಚಿತ ಅಂತ ಹೇಳಿದ್ದರು. ಸದ್ಯ ಅವರಿಗೆ 88 ವರ್ಷ ವಯಸ್ಸು. ಬಿಜೆಪಿಯಲ್ಲಿ 75 ಕಟಾಫ್​ ಏಜ್ ಅನ್ನೋ ಮಾತಿದೆ. ಆದ್ರೆ ಶ್ರೀಧರನ್ ವಿಚಾರದಲ್ಲಿ ಅದನ್ನ ಬದಿಗಿರಿಸಲಾಗಿದೆ ಅಂತ ಕಾಣ್ಸುತ್ತೆ.

ಭಾರತದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಅಬ್ದುಲ್ ಕಲಾಮ್ ಹೇಗೋ ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ಅದೇ ಸ್ಥಾನದಲ್ಲಿ ಇ. ಶ್ರೀಧರನ್ ಅವರನ್ನ ನೋಡಲಾಗುತ್ತೆ. ಹಿಂದೆ ಕಾಂಗ್ರೆಸ್, ಬಿಜೆಪಿ ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಇವರಿಗೆ ಉನ್ನತ ಜವಾಬ್ದಾರಿಗಳನ್ನ ನೀಡಲಾಗಿತ್ತು. ಪದ್ಮಶ್ರೀ, ಪದ್ಮವಿಭೂಷಣ ಸೇರಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಬಂದಿವೆ. ಇನ್ನು ಶ್ರೀಧರ್​ನ ಅವರ ಬಿಜೆಪಿ ಕಡೆ ಪಯಣದ ಬಗ್ಗೆ ನೋಡೋದಾದ್ರೆ, ಇದು ಬಿಜೆಪಿ ಇತ್ತೀಚಿನ ದಿನಗಳಲ್ಲಿ ಫಾಲೋ ಮಾಡ್ತಿರೋ ಹೊಸ ಸ್ಟ್ರಾಟಜಿ. ಎಲ್ಲೆಲ್ಲಿ ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಐಕಾನಿಕ್ ನಾಯಕರು ಇಲ್ವೋ ಅಲ್ಲಿ ಹೊರಗಿನಿಂದ ಇಂಪೋರ್ಟ್ ಮಾಡ್ಕೊಂಡು ಸ್ಥಾನಮಾನ ನೀಡ್ತಾರೆ. ಹೊರಗಿನಿಂದ ಸಿಕ್ಕಿಲ್ಲ ಅಂದ್ರೆ, ಎದುರಾಳಿ ಪಕ್ಷದಲ್ಲಿ ಯಾರಾದ್ರೂ ಐಕಾನಿಕ್ ನಾಯಕರನ್ನ ಕಡೆಗಣನೆ ಮಾಡಿದ್ದಾರಾ ಅಂತ ನೋಡ್ತಾರೆ. ಸಿಕ್ರೆ ಹಿಂದೂ ಮುಂದೆ ನೋಡ್ದೆ ಅವರನ್ನ ತಮ್ಮದೇ ನಾಯಕರಂತೆ ಬಿಂಬಿಸಿಕೊಳ್ತಾರೆ. ಉದಾಹರಣೆಗೆ ಸರ್ದಾರ್​ ಪಟೇಲ್.. ಕಾಂಗ್ರೆಸ್ ನೆಹರೂ-ಗಾಂಧಿ ಕುಟುಂಬದ ಜಪದಲ್ಲಿ ಸರ್ದಾರ್ ಪಟೇಲ್​ರನ್ನ ಮರೆತಿತ್ತು. ಆದ್ರೆ ಮೋದಿ-ಶಾ, ಬಿಜೆಪಿ ಅವರನ್ನ ಬಿಜೆಪಿ ನಾಯಕರೇನೋ ಅನ್ನೋ ಮಟ್ಟಿಗೆ ಅಡಾಪ್ಟ್ ಮಾಡಿಕೊಳ್ತು. ಈಗ ಬಿಜೆಪಿಗೆ ನಮ್ ನಾಯಕರನ್ನ ಹೈಜಾಕ್ ಮಾಡಿದ್ರೆ ಬೈಬೇಕೋ ಅಥವಾ ಸರ್ದಾರ್ ಪಟೇಲ್ ಕಡೆಗಣನೆ ಮಾಡಿದ್ದಕ್ಕೆ ತನ್ನನ್ನ ತಾನೇ ಬೈಕೋಬೇಕೋ ಅಂತ ಕನ್ಫ್ಯೂಸ್ ಆಗೋ ಸರದಿ ಕಾಂಗ್ರೆಸ್​ದು. ಬರೀ ಪಟೇಲ್ ಮಾತ್ರ ಅಲ್ಲ. ಬಿಜೆಪಿ ದೇಶದೆಲ್ಲೆಡೆ ಈ ರೀತಿ ಆಯಾ ಭಾಷೆ ಹಾಗೂ ನಾಡಿನ ಐಕಾನ್​ಗಳನ್ನ ತನ್ನ ಐಕಾನ್​ಗಳಂತೆ ಬಿಂಬಿಸುತ್ತಾ ಬಂದಿದೆ. ನೋಡಿ ಇಷ್ಟುದಿನ ಇವರೆಲ್ಲಾ ಕಡೆಗಣನೆ ಮಾಡಿದ್ರು, ನಾವ್ ಗೌರವ ಕೊಡ್ತೀವಿ ಅಂತ. ಈ ಮೂಲಕ ನಾವೇನೂ ಹೊರಗಿನವರಲ್ಲ ಅಂತ ತೋರಿಸಿಕೊಳ್ಳೋದು ಕೂಡ ಇದರ ಹಿಂದಿರೋ ಉದ್ದೇಶ. ಅಂದ್ಹಾಗೆ ಏಪ್ರಿಲ್ 6ನೇ ತಾರೀಖು 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply