ದೀದಿ ಕೋಟೆಯಲ್ಲಿ ನೆಲದಲ್ಲೇ ಕುಳಿತು ರೈತರೊಂದಿಗೆ ಜೆ.ಪಿ.ನಡ್ಡಾ ಊಟ!

masthmagaa.com:

ಪಶ್ಚಿಮ ಬಂಗಾಳ: ರೈತರ ಪ್ರತಿಭಟನೆ ನಡುವೆಯೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇವತ್ತು ಪಶ್ಚಿಮ  ಬಂಗಾಳ ಪ್ರವಾಸ ಕೈಗೊಂಡಿದ್ದಾರೆ. ಮೊದಲಿಗೆ ರೈತರೊಂದಿಗೆ ನೆಲದ ಮೇಲೆಯೇ ಕುಳಿತು ಜೆ.ಪಿ ನಡ್ಡಾ ಊಟ ಮಾಡಿದ್ರು. ನಂತರ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ವಿರುದ್ಧ ಕಿಡಿಕಾರಿದ್ರು. ದೀದಿ ಪಶ್ಚಿಮ ಬಂಗಾಳದಲ್ಲಿ  ರೈತ ಸಮ್ಮಾನ್ ಯೋಜನೆ ಜಾರಿಯಾಗಲು ಬಿಡಲಿಲ್ಲ..  ಮಮತಾ ದೀದಿಯ ಅಹಂಕಾರ, ಮೊಂಡುತನ ರಾಜ್ಯದ 70 ಲಕ್ಷ ರೈತರನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ವಂಚಿತರನ್ನಾಗಿ ಮಾಡಿದೆ ಅಂತ ಹೇಳಿದ್ರು.

ಈ ನಡುವೆ ಜೆ.ಪಿ ನಡ್ಡಾ ಬಿಜೆಪಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. 15ನೇ ಶತಮಾನದ ಸನ್ಯಾಸಿಯಾದ ಚೈತನ್ಯ ಮಹಾಪ್ರಭು ಅವರ ಜನ್ಮಸ್ಥಾನದಿಂದ ಈ ಯಾತ್ರೆ ಶುರುವಾಗಲಿದೆ. ಇದೊಂದೇ ಅಲ್ಲ.. ಒಟ್ಟು 5 ರಥಯಾತ್ರೆಗಳನ್ನು ನಡೆಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದ್ದು, ಅದರಲ್ಲಿ ಎರಡನ್ನು ಗೃಹ ಸಚಿವ ಅಮಿತ್ ಶಾ ಅವರೇ ಉದ್ಘಾಟನೆ ಮಾಡಲಿದ್ದಾರೆ.

-masthmagaa.com

 

Contact Us for Advertisement

Leave a Reply